alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಖಾನ್ ದಂಪತಿಗೆ ಹಂದಿ ಜ್ವರ

aamir-khan-with-kiran-rao-650_650x400_71502035689

ನಟ ಅಮೀರ್ ಖಾನ್ ಮತ್ತವರ ಪತ್ನಿ ಕಿರಣ್ ರಾವ್ ಸ್ವೈನ್ ಫ್ಲೂನಿಂದ ಬಳಲುತ್ತಿದ್ದಾರೆ. ಮುಂಬೈನ ಅವರ ನಿವಾಸದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅಮೀರ್ ಖಾನ್ ರ ‘ಪಾನಿ ಫೌಂಡೇಶನ್’ ಎನ್ ಜಿ ಓ ವತಿಯಿಂದ ಪುಣೆಯಲ್ಲಿ ‘ಸತ್ಯಮೇವ ಜಯತೇ ವಾಟರ್ ಕಪ್ 2017’ ಆಯೋಜಿಸಲಾಗಿತ್ತು.

ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅಮೀರ್, ತಮಗೆ ಹಂದಿಜ್ವರದ ಸೋಂಕು ತಗುಲಿರುವುದಾಗಿ ತಿಳಿಸಿದ್ದಾರೆ. ಜ್ವರದ ಕಾರಣದಿಂದಾಗಿಯೇ ಅಮೀರ್, ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಎಚ್1ಎನ್1 ಸೋಂಕು ಇರೋದ್ರಿಂದ ಮನೆಯಿಂದ ಹೊರಹೋಗದಂತೆ ಅಮೀರ್ ಗೆ ವೈದ್ಯರು ಸೂಚಿಸಿದ್ದಾರಂತೆ.

ಪಾನಿ ಫೌಂಡೇಶನ್ ನ ಸಹ ಸಂಸ್ಥಾಪಕಿಯಾಗಿರುವ ಕಿರಣ್ ರಾವ್ ಗೆ ಕೂಡ ಎಚ್1ಎನ್1 ತಗುಲಿದೆ. ಅವರು ಕೂಡ ಅಮೀರ್ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಅಮೀರ್ ಪರವಾಗಿ ನಟ ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...