alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳನ್ನು ಸೆಳೆಯುತ್ತಿದೆ ಅಮೀರ್ ಹೊಸ ಲುಕ್

aamir_4zb7fet

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಎಂದೇ ಹೆಸರು ಪಡೆದವರು ಅಮೀರ್ ಖಾನ್. ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಲು ಅವರು ಸಿದ್ಧವಾಗಿರ್ತಾರೆ. ‘ದಂಗಲ್’ ನಲ್ಲಿ ತಮ್ಮ ದೇಹದಿಂದ ಎಲ್ಲರನ್ನೂ ಆಶ್ಚರ್ಯ ಹುಟ್ಟಿಸಿದ್ದ ಅಮೀರ್ ಮತ್ತೆ ಅಭಿಮಾನಿಗಳನ್ನು ಬೆರಗುಗೊಳಿಸಲು ಬರ್ತಿದ್ದಾರೆ.

ಅಮೀರ್ ‘ದಂಗಲ್’ ಯಶಸ್ಸಿನ ನಂತ್ರ ಮುಂದಿನ ಚಿತ್ರ ‘ಟಗ್ ಆಫ್ ಹಿಂದೂಸ್ತಾನ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದ್ರಲ್ಲಿ ಅವರ ಲುಕ್ ಎಲ್ಲರನ್ನು ಆಕರ್ಷಿಸ್ತಾ ಇದೆ. ಚಿತ್ರಕ್ಕಾಗಿ ದಾಡಿ ಬಿಟ್ಟಿದ್ದಾರೆ ಅಮೀರ್ ಖಾನ್. ಕೃಷ್ಣ ಆಚಾರ್ಯ ನಿರ್ದೇಶನದಲ್ಲಿ ಮೂಡಿ ಬರ್ತಾ ಇರುವ ಚಿತ್ರಕ್ಕಾಗಿ ಅಮೀರ್ ತೂಕ ಇಳಿಸಿಕೊಂಡಿದ್ದಾರೆ.

ಚಿತ್ರಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿರುವ ಅಮೀರ್ ‘ದಂಗಲ್’ ಚಿತ್ರಕ್ಕಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ 2018 ರ ದೀಪಾವಳಿಯಂದು ತೆರೆಗೆ ಬರ್ತಾ ಇದೆ. ಇದರ ಮಧ್ಯೆ ‘ಸೀಕ್ರೆಟ್ ಸೂಪರ್ಸ್ಟಾರ್’ ಚಿತ್ರ ಕೂಡ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...