alex Certify
ಕನ್ನಡ ದುನಿಯಾ       Mobile App
       

Kannada Duniya

‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರಕ್ಕೆ ಅಮೀರ್ ಸಂಭಾವನೆ ಎಷ್ಟು ಗೊತ್ತಾ?

ಬಾಲಿವುಡ್ ಚಿತ್ರಗಳಲ್ಲಿ ನಟ-ನಟಿಯರ ಮಧ್ಯೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗ್ತಿದೆ ಅನ್ನೋ ಆರೋಪ ಮೊದಲಿನಿಂದ್ಲೂ ಇದೆ. ನಾಯಕಿ ಪ್ರಧಾನ ಚಿತ್ರಗಳಲ್ಲಿ ಮಾತ್ರ ಹಿರೋಯಿನ್ ಗೆ ಹೆಚ್ಚಿನ ಸಂಭಾವನೆ ಲಭಿಸುತ್ತದೆ. ಇಲ್ಲವಾದಲ್ಲಿ ನಾಯಕರದ್ದೇ ಮೇಲುಗೈ.

ಆದ್ರೆ ಅಮೀರ್ ಖಾನ್ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ಇಂತಹ ತಾರತಮ್ಯ ಮಾಡುತ್ತಿಲ್ಲವಂತೆ. ಈ ಚಿತ್ರಕ್ಕೆ ಖುದ್ದು ಅಮೀರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಪಕರು. ಇಂಡಸ್ಟ್ರಿಯಲ್ಲಿ ಪುರುಷ-ಮಹಿಳೆ ಎಂಬ ಬೇಧಭಾವ ಸಲ್ಲದು ಎನ್ನುತ್ತಾರೆ ಅಮೀರ್.

ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ಜೈರಾ ವಸೀಂ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾಳೆ. ಅಮೀರ್ ಖಾನ್ ರದ್ದು ಸಣ್ಣ ಪಾತ್ರ. ಹಾಗಾಗಿ ಜೈರಾಗಿಂತ ಅಮೀರ್ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ ಅನ್ನೋ ಸುದ್ದಿಯಿತ್ತು. ಖುದ್ದು ಅಮೀರ್ ಖಾನ್ ಇದನ್ನು ತಳ್ಳಿಹಾಕಿದ್ದಾರೆ. ಸಂಭಾವನೆ ಅಂತಾ ಅಮೀರ್ ನಿರ್ಮಾಪಕರಿಂದ ಹಣ ಪಡೆಯುವುದೇ ಇಲ್ಲವಂತೆ.

ಚಿತ್ರ ಹಿಟ್ ಆದ್ರೆ ಲಾಭದಲ್ಲಿ ಇಷ್ಟು ಅಂತಾ ಪಾಲು ಪಡೆಯುತ್ತಾರೆ. ಕಳೆದ 10 ಸಿನೆಮಾಗಳಿಂದ್ಲೂ ಇದೇ ರೀತಿ ಮಾಡ್ತಿದ್ದಾರೆ. ಅದೃಷ್ಟವಶಾತ್ ನನ್ನ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಕ್ಲಿಕ್ ಆಗಿವೆ ಎಂದಿದ್ದಾರೆ. ಸೀಕ್ರೆಟ್ ಸೂಪರ್ ಸ್ಟಾರ್ ಕೂಡ ಸೂಪರ್ ಹಿಟ್ ಆದ್ರೆ ಅಮೀರ್ ಜೇಬು ಭರ್ತಿಯಾಗೋದು ಗ್ಯಾರಂಟಿ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...