alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯಕ್ಕೆ ಕಾಲಿಡಲಿದ್ದರಾ ನಟ ಅಮೀರ್ ಖಾನ್…?

ನಟ ಅಮೀರ್ ಖಾನ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಇಲ್ಲವಾ ಎಂಬ ಗೊಂದಲ ಈಗ ಒಂದು ಮಟ್ಟಿಗೆ ಪರಿಹಾರವಾಗಿದೆ. ಏಕೆಂದರೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಮೀರ್ ಖಾನ್, ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿದಿದ್ದಾರೆ.

ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಅವರು, “ನಾನೊಬ್ಬ ಸೃಜನಶೀಲ ವ್ಯಕ್ತಿ. ಸೃಜನಶೀಲತೆಯೇ ನನ್ನ ಶಕ್ತಿ. ಅದರಿಂದ ನಾನು ಜನರ ಹೃದಯವನ್ನು ತಟ್ಟಬಲ್ಲೆ. ಆದರೆ ರಾಜಕೀಯಕ್ಕೆ ಹೋದರೆ ಒಬ್ಬ ಸೃಜನಾತ್ಮಕ ವ್ಯಕ್ತಿಯಾಗಿ ಇಲ್ಲಿ ಮಾಡಿದಷ್ಟೇ ಕೆಲಸವನ್ನು ಅಲ್ಲಿ ಮಾಡಬಲ್ಲೆ ಎಂದು ನನಗೆ ಅನಿಸುತ್ತಿಲ್ಲ. ಅದೂ ಅಲ್ಲದೆ ನನಗೆ ರಾಜಕೀಯ ಎಂದರೆ ಭಯ. ರಾಜಕೀಯದ ಬಗ್ಗೆ ಯಾರಿಗೆ ಹೆದರಿಕೆ ಇಲ್ಲ ಹೇಳಿ. ಹಾಗಾಗಿಯೇ ನಾನು ಅದರಿಂದ ದೂರ ಇರುತ್ತೇನೆ” ಎನ್ನುವ ಮೂಲಕ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ರಾಜಕಾರಣಿಗಳು ಪ್ರಜೆಗಳಿಗೆ ಉತ್ತರದಾಯಿಗಳು. ಅದರಲ್ಲಿ ಸಂಶಯವೇ ಇಲ್ಲ ಹಾಗಾಗಿ ಪ್ರಜೆಗಳು ಅವರ ನಡೆಗಳನ್ನು ಪ್ರಶ್ನಿಸುತ್ತಿರಬೇಕು ಎಂಬುದಾಗಿಯೂ ಅಮೀರ್ ಖಾನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...