alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಬಿಡುಗಡೆಯಾಗಲ್ಲ ದಂಗಲ್..ಯಾಕೆ ಗೊತ್ತಾ?

aamir_khan_750_1491499252_749x421

ಬಾಲಿವುಡ್ ನಟ ಅಮೀರ್ ಖಾನ್  ದಂಗಲ್ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲು ತಿರಸ್ಕರಿಸಿದ್ದಾರೆ. ಪಾಕಿಸ್ತಾನ ಸೆನ್ಸಾರ್ ಮಂಡಳಿ ಚಿತ್ರದ ಎರಡು ದೃಶ್ಯಗಳನ್ನು ಕಟ್ ಮಾಡುವಂತೆ ಚಿತ್ರ ತಂಡಕ್ಕೆ ಸೂಚನೆ ನೀಡಿತ್ತು. ಆದ್ರೆ ಇದಕ್ಕೆ ಒಪ್ಪಿಗೆ ನೀಡದ ಚಿತ್ರತಂಡ ಪಾಕ್ ನಲ್ಲಿ ಚಿತ್ರ ಬಿಡುಗಡೆ ಮಾಡದಿರಲು ಮುಂದಾಗಿದೆ.

2016ರಲ್ಲಿ ನಡೆದ ಉರಿ ದಾಳಿ ನಂತ್ರ ಪಾಕಿಸ್ತಾನದಲ್ಲಿ ಭಾರತ ಚಿತ್ರಗಳು ಬಿಡುಗಡೆಯಾಗ್ತಾ ಇರಲಿಲ್ಲ. ಇತ್ತೀಚೆಗಷ್ಟೆ ಚಿತ್ರ ಬಿಡುಗಡೆಗೆ ಒಪ್ಪಿಗೆ ಸಿಕ್ಕಿತ್ತು. ಸಾಕಷ್ಟು ಹಿಂದಿ ಚಿತ್ರಗಳು ಪಾಕ್ ನಲ್ಲಿ ತೆರೆ ಕಂಡಿವೆ. ದಂಗಲ್ ಕೂಡ ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಚಿತ್ರತಂಡ ಕೂಡ ಇದಕ್ಕೆ ಮುಂದಾಗಿತ್ತು.

ಚಿತ್ರ ವೀಕ್ಷಣೆ ಮಾಡಿದ ಪಾಕ್ ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಬರುವ ಜನ-ಗಣ-ಮನ ರಾಷ್ಟ್ರಗೀತೆ ಹಾಗೂ ಭಾರತದ ಧ್ವಜ ಹಾರಾಡುವ ದೃಶ್ಯವನ್ನು ಕಟ್ ಮಾಡಿ ಪಾಕ್ ಗೆ ನೀಡುವಂತೆ ಕೇಳಿತ್ತು. ಆದ್ರೆ ಚಿತ್ರತಂಡ ಇದನ್ನು ತಿರಸ್ಕರಿಸಿದೆ. ಇದೊಂದು ಆಟಕ್ಕೆ ಸಂಬಂಧಿಸಿದ ಕಥೆಯಾಗಿದ್ದು. ಇದ್ರಲ್ಲಿ ಪಾಕಿಸ್ತಾನಕ್ಕೆ ಆಗಬೇಕಾಗಿದ್ದು ಏನೂ ಇಲ್ಲ. ಹಾಗಾಗಿ ದೃಶ್ಯ ಕಟ್ ಮಾಡಿ ಚಿತ್ರ ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎಂದು ಅಮೀರ್  ಪ್ರತಿಕ್ರಿಯೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...