alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ಸಿನಿಮಾ ಹಾಡಿ ಹೊಗಳಿದ ಅಮೀರ್ ಖಾನ್

aamir-khan1

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ವಿಭಿನ್ನ ಕತೆ, ಪಾತ್ರ ಆಧರಿತ ಸಿನಿಮಾಗಳಲ್ಲಿ ಅಭಿನಯಿಸುವ ನಟ. ಒಂದೇ ಇಮೇಜ್ ಗೆ ಅಂಟಿಕೊಳ್ಳದೇ, ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಕನ್ನಡ ಚಿತ್ರವೊಂದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೀರ್ ಖಾನ್ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ತಿಥಿ’ ನೋಡಿ ಹಾಡಿ ಹೊಗಳಿದ್ದಾರೆ. ‘ತಿಥಿ’ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಬಹಳ ದಿನಗಳ ಬಳಿಕ, ಅತ್ಯುತ್ತಮವಾದ ಸಿನಿಮಾವನ್ನು ನೋಡಿದ್ದೇನೆ. ‘ತಿಥಿ’ ಹೆಸರಿನ ಇದು ಕನ್ನಡ ಸಿನಿಮಾ. ಇಂಗ್ಲಿಷ್ ನಲ್ಲಿ ಸಬ್ ಟೈಟಲ್ ಇದ್ದು, ನೋಡಲೇಬೇಕಾದ ಸಿನಿಮಾ ಇದಾಗಿದೆ. ಸ್ನೇಹಿತರೇ ‘ತಿಥಿ’ ಸಿನಿಮಾ ಮಿಸ್ ಮಾಡದೇ ನೋಡಿ ಎಂದು ಹೇಳಿದ್ದಾರೆ.

ರಾಮ್ ರೆಡ್ಡಿ ನಿರ್ದೇಶನ ಮಾಡಿರುವ ‘ತಿಥಿ’ ರಾಜ್ಯದಲ್ಲಿ ರಿಲೀಸ್ ಆಗಿ ಯಶಸ್ವಿಯಾಗಿದೆ. ರಾಷ್ಟ್ರಪ್ರಶಸ್ತಿಗೂ ಭಾಜನವಾಗಿರುವ ಈ ಸಿನಿಮಾ ಜೂನ್ 3 ರಂದು ದೇಶಾದ್ಯಂತ ರಿಲೀಸ್ ಆಗಲಿದೆ. ಅಮೀರ್ ಖಾನ್ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...