alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಥಾ ಪ್ರಮಾದ ಮಾಡಿದ್ದಾರೆ ನೋಡಿ ಅಮೀರ್ ಖಾನ್

aamir-khan_640x480_41482082450

ಅವರನ್ನು ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಕರೀತಾರೆ. ಅವರ ನಡೆ- ನುಡಿ ಎಲ್ಲವೂ ಹಿತ-ಮಿತವಾಗಿರುತ್ತದೆ ಅನ್ನೋದು ಅಭಿಮಾನಿಗಳ ನಂಬಿಕೆ. ಆದ್ರೆ ಅಮೀರ್ ಖಾನ್ ಆಗಾಗ ಅದನ್ನೆಲ್ಲ ಹುಸಿಯಾಗಿಸ್ತಾರೆ.

ಅಸಹಿಷ್ಣುತೆ ಬಗ್ಗೆ ಅಮೀರ್ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ತುತ್ತಾಗಿದ್ರು. ಇದೀಗ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಮತ್ತೊಂದು ಪ್ರಮಾದ ಎಸಗಿದ್ದಾರೆ. ನಟಿ ಶಬಾನಾ ಅಜ್ಮಿ ಅವರನ್ನು ಜಾವೇದ್ ಅಖ್ತರ್ ಪುತ್ರಿ ಎಂದುಬಿಟ್ಟಿದ್ದಾರೆ.

‘ಕಾಫಿ ವಿತ್ ಕರಣ್’ ಶೋನ ರ್ಯಾಪಿಡ್ ಫೈರ್ ರೌಂಡ್ ನಲ್ಲಿ ಅಮೀರ್ ಈ ಯಡವಟ್ಟು ಮಾಡಿದ್ದಾರೆ. ಶಬಾನಾ, ಅಖ್ತರ್ ಫ್ಯಾಮಿಲಿಯ 3 ನೇ ಜನರೇಶನ್ ಎಂದಿದ್ದಾರೆ. ಝೋಯಾ ಅಖ್ತರ್ ಅಥವಾ ಫರ್ಹಾನ್ ಅಖ್ತರ್ ಹೆಸರು ಹೇಳುವ ಬದಲು ಶಬಾನಾ ಹೆಸರನ್ನು ಉಲ್ಲೇಖಿಸಿದ್ದಾರೆ.

ಶಬಾನಾ ಅಜ್ಮಿ ಹಿಂದಿ ಚಿತ್ರರಂಗದ ಖ್ಯಾತ ನಟಿ, ಜಾವೇದ್ ಅಖ್ತರ್ ಖ್ಯಾತ ಕವನ ರಚನೆಕಾರರು. ಅವರಿಬ್ಬರೂ ಪತಿ- ಪತ್ನಿ ಅನ್ನೋದು ಇಡಿ ಜಗತ್ತಿಗೇ ತಿಳಿದಿದೆ. ಅಂಥದ್ರಲ್ಲಿ ಅಮೀರ್ ಖಾನ್, ಶಬಾನಾ ಅಜ್ಮಿ ಅವರನ್ನು ಜಾವೇದ್ ಅಖ್ತರ್ ಮಗಳು ಎಂದಿರೋದು ತೀವ್ರ ಟೀಕೆಗೆ ಗುರಿಯಾಗಿದೆ. ಸ್ವತಃ ಅಮೀರ್ ಮುಜುಗರಕ್ಕೊಳಗಾಗಿದ್ದಾರೆ. ಇದಕ್ಕೆ ಅಖ್ತರ್ ಕುಟುಂಬದವರ ಪ್ರತಿಕ್ರಿಯೆ ಏನು ಅನ್ನೋದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...