alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾಭಾರತ ಅಮೀರ್ ಖಾನ್ ಡ್ರೀಮ್ ಪ್ರಾಜೆಕ್ಟ್

ಬಾಹುಬಲಿ ನಂತ್ರ ರಾಜಮೌಳಿ ಮಹಾಭಾರತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಾಜಮೌಳಿ ತಮ್ಮ ಇಚ್ಛೆ ವ್ಯಕ್ತಪಡಿಸುತ್ತಿದ್ದಂತೆ ಅಮೀರ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಹಾಭಾರತದಲ್ಲಿ ತಮ್ಮಿಷ್ಟದ ಪಾತ್ರ ಯಾವುದೆಂಬುದನ್ನೂ ಅಮೀರ್ ಹೇಳಿದ್ದಾರೆ.

ಸೀಕ್ರೆಟ್ ಸೂಪರ್ ಸ್ಟಾರ್ ಪ್ರಮೋಷನ್ ಗೆ ಬಂದಿದ್ದ ಅಮೀರ್ ಖಾನ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಮಹಾಭಾರತ ಎಂದಿದ್ದಾರೆ. ನನಗೆ ಇದನ್ನು ಮಾಡಲು ಭಯ. ಯಾಕೆಂದ್ರೆ ನನ್ನ ಜೀವನದ 15-20 ವರ್ಷವನ್ನು ಇದು ತೆಗೆದುಕೊಳ್ಳಬಹುದು ಎಂದು ಅಮೀರ್ ಹೇಳಿದ್ದಾರೆ.

ಈ ಹಿಂದೆ ಮಹಾಭಾರತದ ಬಗ್ಗೆ ಮಾತನಾಡಿದ್ದ ಅಮೀರ್, ಕೃಷ್ಣ ಹಾಗೂ ಕರ್ಣ ನನ್ನಿಷ್ಟದ ಪಾತ್ರ ಎಂದಿದ್ದರು. ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ ಅಮೀರ್ ಕರ್ಣನ ಪಾತ್ರಕ್ಕೆ ನನ್ನ ದೇಹ ಸೂಕ್ತವೆನಿಸುವುದಿಲ್ಲ. ಕೃಷ್ಣನ ಪಾತ್ರಕ್ಕೆ ಅವಕಾಶ ಸಿಗಬಹುದು ಎಂದಿದ್ದಾರೆ. ಅರ್ಜುನನ ಪಾತ್ರವನ್ನೂ ಇಷ್ಟಪಡುತ್ತೇನೆ ಎಂದು ಅಮೀರ್ ಹೇಳಿದ್ದಾರೆ.

ರಾಜಮೌಳಿ ಕೆಲಸ ನನಗೆ ತುಂಬಾ ಇಷ್ಟ. ಒಂದು ವೇಳೆ ಅವರು ಮಹಾಭಾರತ ಸಿನಿಮಾ ಮಾಡಿದಲ್ಲಿ ನಾನು ಕೃಷ್ಣ ಅಥವಾ ಕರ್ಣನ ಪಾತ್ರ ಮಾಡ್ತೇನೆ ಎಂದ ಅಮೀರ್, ರಜನಿಕಾಂತ್, ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಜೊತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...