alex Certify
ಕನ್ನಡ ದುನಿಯಾ       Mobile App
       

Kannada Duniya

2 ಸಾವಿರ ಕೋಟಿ ಗಳಿಕೆ ಕಂಡು ದಾಖಲೆ ಬರೆದ ದಂಗಲ್

dangal1024_1498478391_749x421

ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಇನ್ನೊಂದು ದಾಖಲೆ ಮಾಡಿದೆ. ವಿಶ್ವದಾದ್ಯಂತ 2000 ಕೋಟಿ ರೂಪಾಯಿ ಗಳಿಕೆ ಕಂಡ ಭಾರತದ ಮೊದಲ ಸಿನಿಮಾವೆಂಬ ಹೆಗ್ಗಳಿಕೆಗೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಪಾತ್ರವಾಗಿದೆ.

ದಂಗಲ್ ಚಿತ್ರ ಇತ್ತೀಚೆಗಷ್ಟೇ ಚೀನಾದ 9000 ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಸ್ ಎಸ್ ರಾಜಮೌಳಿ ಚಿತ್ರ ಬಾಹುಬಲಿ-2 ಕೂಡ 2 ಸಾವಿರ ಕೋಟಿ ಸಮೀಪದಲ್ಲಿದೆ. ಆದ್ರೆ ಇದಕ್ಕೂ ಮೊದಲೇ ದಂಗಲ್ ದಾಖಲೆ ಬರೆದಿದೆ.

ಆಶ್ಚರ್ಯವೆಂದ್ರೆ ದಂಗಲ್ ಭಾರತದಲ್ಲಿ 338.38 ಕೋಟಿ ಮಾತ್ರ ಗಳಿಕೆ ಕಂಡಿದೆ. ಚೀನಾದಲ್ಲಿ ಈ ಮೊದಲು ಬಿಡುಗಡೆಯಾದ ಅಮೀರ್ ಖಾನ್ ಪಿ.ಕೆ ಚಿತ್ರ 100 ಕೋಟಿ ಗಳಿಕೆ ಕಂಡಿತ್ತು. ಚೀನಾದಲ್ಲಿ ತೆರೆಗೆ ಬಂದ ಮೊದಲ ಅಮೀರ್ ಖಾನ್ ಚಿತ್ರ 3 ಈಡಿಯಟ್ಸ್. ಇದು ಸುಮಾರು 15 ಕೋಟಿ ಗಳಿಕೆ ಕಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...