alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಖಾನ್ ಚಿತ್ರಕ್ಕೆ 1000 ಕೋಟಿ ಹಣ ನೀಡ್ತಿರೋದು ಯಾರು ಗೊತ್ತಾ?

ಅಮೀರ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಅಮೀರ್ ಖಾನ್ ಮಹತ್ವಾಕಾಂಕ್ಷಿ ಯೋಜನೆ ಮಹಾಭಾರತದ ಬಗ್ಗೆ ದೊಡ್ಡ ಸುದ್ದಿಯೊಂದು ಬಂದಿದೆ. ಮಾಹಿತಿಗಳ ಪ್ರಕಾರ ಮಹಾಭಾರತದಂತ ದೊಡ್ಡ ಬಜೆಟ್ ಚಿತ್ರ ನಿರ್ಮಾಣಕ್ಕೆ ಮುಕೇಶ್ ಅಂಬಾನಿ ಹಣ ಹೂಡಲಿದ್ದಾರಂತೆ. ಇದನ್ನು ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಕರೆಯಲಾಗ್ತಿದೆ.

ವರದಿ ಪ್ರಕಾರ, ಮುಕೇಶ್ ಅಂಬಾನಿ, ಅಮೀರ್ ಖಾನ್ ಮಹತ್ವಾಕಾಂಕ್ಷಿ ಚಿತ್ರಕ್ಕೆ ಸಹ ನಿರ್ಮಾಣ ಮಾಡಲಿದ್ದಾರಂತೆ. ಚಿತ್ರಕ್ಕೆ 1000 ಕೋಟಿ ಬಜೆಟ್ ನೀಡಲಿದ್ದಾರಂತೆ. ಮುಕೇಶ್ ಅಂಬಾನಿ ಚಿತ್ರಕ್ಕಾಗಿ ಹೊಸ ಮೀಡಿಯಾ ಹೌಸ್ ತೆರೆಯಲಿದ್ದಾರಾ ಇಲ್ಲ ಜಿಯೋ ಹಾಗೂ ವೈಕಾಮ್ 18 ಮೂಲಕವೇ ಚಿತ್ರ ನಿರ್ಮಾಣ ಮಾಡಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಈ ಬಗ್ಗೆ ಮುಕೇಶ್ ಅಂಬಾನಿಯಾಗ್ಲಿ, ಅಮೀರ್ ಖಾನ್ ಆಗ್ಲಿ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಮೀರ್ ಖಾನ್ ಕನಸು ಮಹಾಭಾರತ. ದೇಶದ ದೊಡ್ಡ ಚಿತ್ರಗಳಲ್ಲಿ ಇದು ಒಂದಾಗಬೇಕೆಂಬ ಬಯಕೆ ಅವರದ್ದು. ಆದ್ರೆ ಇಷ್ಟೊಂದು ಬಜೆಟ್ ಎಲ್ಲಿಂದ ತರೋದು ಎಂಬ ಪ್ರಶ್ನೆ ಅಮೀರ್ ಕಾಡಿತ್ತು. ಆದ್ರೀಗ ಮುಕೇಶ್ ಅಂಬಾನಿ ಬೆಂಬಲ ನೀಡಿದ್ದು, ಶೀಘ್ರದಲ್ಲಿಯೇ ಚಿತ್ರ ನಿರ್ಮಾಣ ಶುರುವಾಗುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...