alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಿತೆರೆ ಮೇಲೆ ಪುಲ್ಲೇಲಾ ಗೋಪಿಚಂದ್ ಬದುಕು

Biopic on PV Sindhu's coach Gopichand plannedರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ತಾರೆಯಾಗಿ ಮಿನುಗುತ್ತಿರುವ ಭಾರತದ ಪಿ.ವಿ. ಸಿಂಧು ಸಾಧನೆಯ ಹಿಂದಿರುವವರು ಕೋಚ್ ಪುಲ್ಲೇಲಾ ಗೋಪಿಚಂದ್. ಗೋಪಿಚಂದ್ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಚಿರಪರಿಚಿತರು.

ಕ್ರೀಡಾ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ ಗೋಪಿಚಂದ್ ಅವರ ಬದುಕು ಸಿನಿಮಾ ಆಗಲಿದೆ. ಹಿಂದಿ ಮತ್ತು ತೆಲುಗಿನಲ್ಲಿ ಇವರ ಜೀವನಚರಿತ್ರೆ ಆಧಾರಿತ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಗೋಪಿಚಂದ್ ಅವರ ಬದುಕು ಸಿನಿಮೀಯ ರೀತಿಯಲ್ಲೇ ಇದೆ, ಆರಂಭದಲ್ಲಿ ಅವರು ಪಟ್ಟ ಕಷ್ಟ, ಅವರ ಲವ್ ಸ್ಟೋರಿ, ತಾಯಿಯ ಭಾವನಾತ್ಮಕತೆ, ವೃತ್ತಿ ಬದುಕನ್ನೇ ನುಂಗಿ ಹಾಕುವುದರಲ್ಲಿದ್ದ ಗಾಯದ ಸಮಸ್ಯೆ, ಇದೀಗ ಭಾರತೀಯ ಬ್ಯಾಂಡ್ಮಿಂಟನ್ ಇತಿಹಾಸವನ್ನೇ ಬದಲಿಸಿದ ಒಲಿಂಪಿಕ್ ಗೆಲುವು ಇವೆಲ್ಲನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲು ನಿರ್ಮಾಪಕ ಅಭಿಷೇಕ್ ಆಸಕ್ತಿ ತೋರಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಪ್ರವೀಣ್, ಪುಲ್ಲೇಲಾ ಗೋಪಿಚಂದ್ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಈಗಾಗ್ಲೇ ಗೋಪಿಚಂದ್ ಸ್ಕ್ರಿಪ್ಟ್ ಓಕೆ ಮಾಡಿದ್ದು, ನವೆಂಬರ್ ನಲ್ಲಿ ಚಿತ್ರ ಸೆಟ್ಟೇರಲಿದೆ. ಮಾಜಿ ಬ್ಯಾಡ್ಮಿಂಟನ್ ಆಟಗಾರ ಸುಧೀರ್ ಬಾಬು, ಗೋಪಿಚಂದ್ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...