alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ನಿರ್ಮಾಪಕನ ಬಣ್ಣ ಬಯಲು ಮಾಡಲಿದ್ದಾರೆ ಖ್ಯಾತ ನಟಿ

ಇತ್ತೀಚಿನ ದಿನದಲ್ಲಿ ಭಾರಿ ಸದ್ದು ಮಾಡುತ್ತಿರುವ ಮೀಟೂ ಅಭಿಯಾನದಲ್ಲಿ ಈಗಾಗಲೇ ಸಿನಿಮಾ, ರಾಜಕೀಯ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರದ ಗಣ್ಯರ ಹೆಸರು ಕೇಳಿಬಂದಿದ್ದು, ಇದೀಗ ಬಾಲಿವುಡ್‌ ನ ಮತ್ತೊಬ್ಬ ಪ್ರಸಿದ್ಧ ನಿರ್ಮಾಪಕನ ಕೊರಳಿಗೆ ಸುತ್ತಿಕೊಳ್ಳುವ ಎಲ್ಲ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿದೆ.

ಬಾಲಿವುಡ್‌ನ ಪ್ರಸಿದ್ಧ ಪ್ರೊಡಕ್ಷನ್ ಹೌಸ್ ಹೊಂದಿರುವ ನಿರ್ಮಾಪಕನ ಮೇಲೆ, ಖ್ಯಾತ ನಟಿಯೊಬ್ಬಳು ಆರೋಪ ಮಾಡಿದ್ದು, ಅವರ ಚಿತ್ರಗಳಿಗೆ ಕೆಲಸ ಮಾಡುವಾಗ ಅನೇಕ ಬಾರಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ., ಶೀಘ್ರದಲ್ಲಿಯೇ ನಟಿ ನಿರ್ಮಾಪಕನ ಹೆಸರು ಹಾಗೂ ಕಿರುಕುಳ ನೀಡಿದ್ದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ.

ಯಾವ ನಟಿ ಯಾವ ನಿರ್ಮಾಪಕನ ವಿರುದ್ಧ ಆರೋಪ ಮಾಡುತ್ತಾಳೆ ಎನ್ನುವುದನ್ನು ಅರಿಯಲು ಬಾಲಿವುಡ್ ಕಾದು ಕುಳಿತಿದೆ. ಆಷ್ಟಾದರೂ ನಿರ್ಮಾಪಕ ಮಾತ್ರ ನಟಿ ಮಾಡಲು ಹೊರಟಿರುವ ಎಲ್ಲಾ ಆರೋಪಗಳು ಸುಳ್ಳು ಎಂದಿದ್ದಾರೆ.

ಇದರೊಂದಿಗೆ ನಟಿ ಮಾಡುತ್ತಿರುವ ಈ ಆರೋಪಗಳನ್ನು ನಿರ್ಮಾಪಕನ ಪತ್ನಿಯೂ ಆಗಿರುವ ಬಾಲಿವುಡ್ ನಟಿ ಖಾಸಗಿ ಮಾತುಕತೆ ವೇಳೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಇದೆಲ್ಲ ಸುಳ್ಳಿನ ಕಂತೆ ಎಂದು ಸಮರ್ಥಿಸಿಕೊಂಡಿದ್ದಾಳೆ. ದಂಪತಿಗಳು ಒಟ್ಟಿಗೆ ಅನೇಕ ಸಮಾರಂಭಗಳಲ್ಲಿ ಕಾಣಿಸಿಕೊಂಡರು, ಆಕೆಯ ಪತಿ ಬಗ್ಗೆ ನಟಿಗೆ ಹೆಚ್ಚು ತಿಳಿದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಕಿರುಕುಳ ಆರೋಪ ಹೊರಿಸುತ್ತಿರುವ ಖ್ಯಾತ ಬಾಲಿವುಡ್ ನಟಿ, ಕೆಲವೇ ದಿನದಲ್ಲಿ ನಿರ್ಮಾಪಕನ ವಿರುದ್ಧ #ಮೀಟೂ ಅಭಿಯಾನದಲ್ಲಿ ಬರೆಯಲು ಹಾಗೂ ಆತನ ಮುಖವಾಡವನ್ನು ಕಳಚಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವಾರು ಗಣ್ಯರ ಹೆಸರು ಕೇಳಿಬಂದಿರುವ ಈ ಮಿಟೂ ಅಭಿಯಾನ ಮುಂದಿನ ದಿನದಲ್ಲಿ ಇನ್ನೆಷ್ಟು ಗಣ್ಯರ ಗುಟ್ಟನ್ನು ರಟ್ಟು ಮಾಡುವುದೋ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...