alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗೆ ನಟಿ ಮಹಿರಾ ನೀಡಿದ ಗಿಫ್ಟ್ ಏನು ಗೊತ್ತಾ…?

ಪಾಕಿಸ್ತಾನದ ನಟಿ ಮಹಿರಾ ಖಾನ್ ತನ್ನ ಹೆಜ್ಜೆ ಗುರುತುಗಳನ್ನು ಬಾಲಿವುಡ್ ನಲ್ಲಿ ಮೂಡಿಸುತ್ತಿದ್ದಾರೆ. ಶಾರೂಕ್ ಖಾನ್ ಅಭಿನಯದ ರಯೀಸ್ ಚಿತ್ರದಲ್ಲಿ ಅಭಿನಯಿಸಿರುವ ಮಹಿರಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ಮಹಿರಾ, ಅಭಿಮಾನಿಗಳ ಚಿಕ್ಕ ಚಿಕ್ಕ, ಆಸೆಗಳನ್ನು ಪೂರೈಸುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬ ಗಿಫ್ಟ್ ಒಂದನ್ನು ಮಹಿರಾರಿಂದ ಬಯಸಿದ್ದಾನೆ. ಹಾಗಿದ್ರೆ ಆ ಗಿಫ್ಟ್ ಏನು ಎಂಬ ಕುತೂಹಲ ಅಲ್ವಾ?

ಕಪ್ಪು ಬಣ್ಣದ ಉಡುಗೆಗೆ ಬಂಗಾರದ ಬಣ್ಣದ ಕಸೂತಿ ಕೆಲಸ ಇರೋ ಫೋಟೋವನ್ನು ಮಹಿರಾ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಕಮೆಂಟ್ ಮಾಡಿ ಖುಷಿ ಪಟ್ಟಿದ್ರು. ಇದಕ್ಕೆ ಮಹಿರಾ ಸಹ ಪ್ರತಿ ಟ್ವಿಟ್ ಮಾಡಿ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಆದ್ರೆ, ಒಬ್ಬ ಅಭಿಮಾನಿ ನಟಿ ತೊಟ್ಟ ಉಡುಗೆಯನ್ನು ತನಗೆ ನೀಡುವಂತೆ ಕೇಳಿಕೊಂಡಿದ್ದಾನೆ.

ಈ ಟ್ವಿಟ್ ಕಂಡು ಮಹಿರಾ ತನ್ನ ತಂಡದ ಸದಸ್ಯರಿಗೆ, ಅಭಿಮಾನಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಅದ್ರಂತೆ ಅಭಿಮಾನಿಯನ್ನು ಸಂಪರ್ಕಿಸಿ, ವಿಳಾಸ ಪಡೆದು ಉಡುಗೆಯನ್ನು ಕಳುಹಿಸಿಕೊಟ್ಟಿದ್ದಾರೆ. ಅಭಿಮಾನಿ ಉಡುಗೊರೆ ಸಿಗುತ್ತಿದ್ದಂತೆ, ಫೋಟೋ ಅಪ್ ಲೋಡ್ ಮಾಡಿ ಖುಷಿಪಟ್ಟಿದ್ದಾರೆ. ಮಹಿರಾರಿಂದ ಗಿಫ್ಟ್ ಪಡೆದ ಅಭಿಮಾನಿಯ ಸಂತಸಕ್ಕೆ ಪಾರವೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...