alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಭಾಸ್ ಸಾಹೋ ಚಿತ್ರದ ಸಾಹಸ ದೃಶ್ಯಕ್ಕೆ ಖರ್ಚಾಗ್ತಿದೆ ಇಷ್ಟು ಕೋಟಿ…?

ಬಾಹುಬಲಿ ಪ್ರಭಾಸ್ ಸದ್ಯ ಸಾಹೋ ಚಿತ್ರದ ಶೂಟಿಂಗ್ ನಲ್ಲಿ  ಬ್ಯುಸಿಯಿದ್ದಾರೆ. ಚಿತ್ರದ ಚಿತ್ರೀಕರಣ ಯುಎಇ ಯಲ್ಲಿ ನಡೆಯುತ್ತಿದೆ. ಚಿತ್ರದ ಸಾಹಸ ಸನ್ನಿವೇಶವನ್ನು ಶೂಟ್ ಮಾಡಲಾಗ್ತಿದೆ. ಮೂಲಗಳ ಪ್ರಕಾರ ಪ್ರಭಾಸ್ ಸಾಹಸ ಸನ್ನಿವೇಶದ ಚಿತ್ರೀಕರಣಕ್ಕಾಗಿ 90 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆಯಂತೆ.

ಸಾಹಸ ದೃಶ್ಯಗಳನ್ನು ಅಂತರಾಷ್ಟ್ರೀಯ ಸ್ಟಂಟ್ ಡೈರೆಕ್ಟರ್ ಕೆನ್ನಿ ಬೆಟ್ರಸ್ ಮಾಡ್ತಿದ್ದಾರೆ. ಈ ವರ್ಷವೇ ತೆರೆಗೆ ಬರ್ತಿರುವ ಚಿತ್ರವನ್ನು ಸುಜಿತ್ ನಿರ್ದೇಶನ ಮಾಡ್ತಿದ್ದಾರೆ. 300 ಕೋಟಿ ರೂಪಾಯಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗ್ತಿದೆ.

ಬಾಹುಬಲಿ ದಿ ಬಿಗ್ನಿಂಗ್ ಚಿತ್ರ ನಿರ್ಮಾಣಕ್ಕೆ 180 ಕೋಟಿ ಖರ್ಚಾಗಿದೆ. ಆದ್ರೆ ಸಾಹೋ ಮತ್ತೂ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗ್ತಿದೆ. ಒಂದು ದೃಶ್ಯದ ಚಿತ್ರೀಕರಣಕ್ಕೆ 90 ಕೋಟಿ ಖರ್ಚು ಮಾಡಲಾಗ್ತಿದೆ. 300 ಕೋಟಿಯಲ್ಲಿ ನಿರ್ಮಾಣವಾಗ್ತಿರುವ ಈ ಚಿತ್ರವನ್ನು ದೇಶದ ಎರಡನೇ ಅತಿ ದೊಡ್ಡ ಬಜೆಟ್ ಚಿತ್ರವೆನ್ನಲಾಗ್ತಿದೆ. 2.0 ಚಿತ್ರಕ್ಕೆ ಅತಿ ಹೆಚ್ಚು ಹಣ ಸುರಿಯಲಾಗಿದೆ.

ಪ್ರಭಾಸ್ ಸಾಹೋ ಚಿತ್ರದ ಸಾಹಸ ದೃಶ್ಯಕ್ಕೆ ರಿಯಾಲಿಟಿ ಟಚ್ ನೀಡಲು 37 ಕಾರು ಹಾಗೂ 5 ಟ್ರಕ್ ಬಳಸಲಾಗ್ತಿದೆ. ಶೂಟಿಂಗ್ ವೇಳೆ ಇವೆಲ್ಲವೂ ದ್ವಂಸವಾಗಲಿವೆ. ಈ ಎಲ್ಲ ಕಾರು ಹಾಗೂ ಟ್ರಕ್ ಜೊತೆ ಪ್ರಭಾಸ್ ಆಕ್ಷನ್ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...