alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಡಿ ಮಾಡಿದ್ದಾಳೆ ಮೂರು ಅಡಿ ಎತ್ತರದ ಮಾಡೆಲ್

ಮಾಡೆಲ್ ಎಂದಾಕ್ಷಣ ತೆಳ್ಳಗೆ, ಬೆಳ್ಳಗೆ, ಎತ್ತರಕ್ಕಿರುವ ದೇಹ ಮನಸ್ಸಿನ ಮುಂದೆ ಹಾದು ಹೋಗುತ್ತದೆ. ಎತ್ತರಕ್ಕಿರುವವರು ಮಾತ್ರ ಮಾಡೆಲ್ ಆಗಬೇಕೆಂಬ ನಿಯಮವೇನೂ ಇಲ್ಲ. ಕುಳ್ಳಗಿರುವ ವ್ಯಕ್ತಿಗಳೂ ಮಾಡೆಲ್ ಆಗಿ ಹೆಸರು ಗಳಿಸಬಹುದು. ಇದಕ್ಕೆ ಡ್ರು ಪ್ರೇಸ್ಟಾ ಉತ್ತಮ ಉದಾಹರಣೆ.

ಈ ಬಾರಿ ವಿಶ್ವ ಸುಂದರಿ ಪಟ್ಟಕ್ಕೇರಿರುವ ಮನುಷಿ ಫೋಟೋ ಒಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದರೆ ಇನ್ನೊಂದು ಕಡೆ ಕ್ಯಾಲಿಫೋರ್ನಿಯಾದ ಡ್ರು ಪ್ರೇಸ್ಟಾ ಫೋಟೋ ವೈರಲ್ ಆಗಿದೆ. ಡ್ರು ಪ್ರೇಸ್ಟಾ ವಯಸ್ಸು 21. ಎತ್ತರ 3 ಅಡಿ. ಯಸ್. ಕೇವಲ 3 ಅಡಿ ಎತ್ತರವಿರುವ ಡ್ರು ಸಿಕ್ಕಾಪಟ್ಟೆ ಹೆಸರು ಮಾಡ್ತಿದ್ದಾಳೆ.

ಅನೇಕ ಕಂಪನಿಗಳು ತಮ್ಮ ಬ್ರ್ಯಾಂಡ್ ಪ್ರಚಾರ ಮಾಡುವಂತೆ ಡ್ರು ಪ್ರೇಸ್ಟಾಗೆ ಆಫರ್ ನೀಡ್ತಾಯಿವೆ. ಈಗಾಗಲೇ ಡ್ರು ಅನೇಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾಳೆ. ಚಿಕ್ಕವಳಿರುವಾಗಲೇ ಫ್ಯಾಷನ್ ಲೋಕದಲ್ಲಿ ಹೆಸರು ಮಾಡಬೇಕೆಂಬುದು ಡ್ರು ಪ್ರೇಸ್ಟಾ ಕನಸಾಗಿತ್ತಂತೆ.

ಕನಸು ನನಸಾಗುವುದು ಅಷ್ಟು ಸುಲಭವಾಗಿರಲಿಲ್ಲ. ಅನೇಕ ತೊಂದರೆಗಳನ್ನು ಎದುರಿಸಿ, ಟೀಕೆಗಳನ್ನು ಕೇಳಿಯೂ ಛಲ ಬಿಡದ ಡ್ರು ಸಾಧಿಸಿ ತೋರಿಸಿದ್ದಾಳೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸುಂದರವಾಗಿದ್ದಾರೆ ಎನ್ನುತ್ತಾಳೆ ಡ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...