alex Certify
ಕನ್ನಡ ದುನಿಯಾ       Mobile App
       

Kannada Duniya

ಉನ್ನತ ಶಿಕ್ಷಣ ಪಡೆದಿರುವ ಬಾಲಿವುಡ್ ಸೆಲೆಬ್ರಿಟಿಗಳು

ಬಾಲಿವುಡ್ ಮಂದಿಯೆಲ್ಲಾ ಹುಟ್ಟುತ್ತಲೇ ನಟ-ನಟಿ ಆಗಬೇಕು ಅಂದುಕೊಂಡವರಲ್ಲ. ಎಷ್ಟೋ ಮಂದಿ ಉನ್ನತ ಶಿಕ್ಷಣ ಪಡೆದು ನಂತರ ಚಿತ್ರರಂಗಕ್ಕೆ ಬಂದವರೂ ಇದ್ದಾರೆ. ಹಾಗಾದ್ರೆ ಬಿಟೌನ್ ನಲ್ಲಿ ಯಾರ್ಯಾರು ಎಷ್ಟೆಷ್ಟು ಓದಿದ್ದಾರೆ ನೋಡೋಣ.

ಅಮಿತಾಭ್ ಬಚ್ಚನ್ : ಖ್ಯಾತ ಹಿಂದಿ ಕವಿ ಹರಿವಂಶ್ ರಾಯ್ ಬಚ್ಚನ್ ರ ಪುತ್ರ ಅಮಿತಾಭ್ ದೆಹಲಿ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಕಿರೋರಿ ಮಲ್ ಕಾಲೇಜಿನಲ್ಲಿ ವಿಜ್ಞಾನ ಮತ್ತು ಕಲೆ ಎರಡೂ ವಿಷಯಗಳಲ್ಲೂ ಉನ್ನತ ಶಿಕ್ಷಣ ಮುಗಿಸಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿವಿಯಿಂದ ಬಿಗ್ ಬಿಗೆ ಗೌರವ ಡಾಕ್ಟರೇಟ್ ದೊರೆತಿದೆ.

ಶ್ರುತಿ ಹಾಸನ್ : ಮುಂಬೈನ ಸೇಂಟ್ ಆ್ಯಂಡ್ರೂ ಕಾಲೇಜಿನಲ್ಲಿ ಶ್ರುತಿ ಮನಃಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಅಷ್ಟೇ ಅಲ್ಲ ಕ್ಯಾಲಿಫೋರ್ನಿಯಾದ ಮ್ಯೂಸಿಶಿಯನ್ ಇನ್ ಸ್ಟಿಟ್ಯೂಟ್ ನಲ್ಲೂ ತರಬೇತಿ ಪಡೆದಿದ್ದಾರೆ.

ವಿದ್ಯಾ ಬಾಲನ್ : ಕಹಾನಿ ಚಿತ್ರದ ನಾಯಕಿ ವಿದ್ಯಾ ಬಾಲನ್ ಸೇಂಟ್ ಕ್ಸೇವಿಯರ್ ಕಾಲೇಜಿನ ಪದವೀಧರೆ. ಮುಂಬೈ ವಿವಿಯಲ್ಲಿ ಸಮಾಜಶಾಸ್ತ್ರ ವಿಷಯದ ಮೇಲೆ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ಪರಿಣಿತಿ ಚೋಪ್ರಾ : ಬ್ರಿಟನ್ ನ ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಓದಿದ್ದಾಳೆ ಪರಿಣಿತಿ. ಬ್ಯುಸಿನೆಸ್, ಫೈನಾನ್ಸ್ ಮತ್ತು ಎಕನಾಮಿಕ್ಸ್ ವಿಷಯಗಳಲ್ಲಿ ಮೂರು ಪದವಿ ಪಡೆದಿದ್ದಾಳೆ.

ಆರ್ ಮಾಧವನ್ : ಎಲೆಕ್ಟ್ರಾನಿಕ್ಸ್ ಪದವೀಧರ ಮಾಧವನ್, ರಾಯಲ್ ಆರ್ಮಿ, ನೇವಿ ಹಾಗೂ ಏರ್ ಫೋರ್ಸ್ ತರಬೇತಿಯನ್ನೂ ಪಡೆದಿದ್ದರು. ಕೆನಡಾದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಸೋನು ಸೂದ್ : ದಬಾಂಗ್ ಖ್ಯಾತಿಯ ಸೋನು ಸೂದ್ ನಾಗ್ಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಪದವಿ ಪಡೆದಿದ್ದಾರೆ.

ಸೋಹಾ ಅಲಿ ಖಾನ್ : ಆಕ್ಸ್ ಫರ್ಡ್ ಕಾಲೇಜಿನಲ್ಲಿ ಸೋಹಾ ಅಲಿ ಖಾನ್ ಮಾಡರ್ನ್ ಹಿಸ್ಟರಿ ವಿಷಯದಲ್ಲಿ ಪದವಿ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ 2 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ಇಮ್ರಾನ್ ಖಾನ್ : ಪ್ರೆಮೊಂಟ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಇಮ್ರಾನ್ ಖಾನ್ ನಂತರ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲೂ ಶಿಕ್ಷಣ ಪಡೆದಿದ್ದಾರೆ.

ಆಯುಷ್ಮಾನ್ ಖುರಾನಾ : ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದಿರೋ ಆಯುಷ್ಮಾನ್, ಮಾಸ್ ಕಮ್ಯೂನಿಕೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು.

ಶಾರುಖ್ ಖಾನ್ : ಹಂಸರಾಜ್ ಕಾಲೇಜಿನಲ್ಲಿ ಪದವಿ ಪಡೆದಿರೋ ಶಾರುಖ್, ಜಾಮಿಯಾ ಮಲಿಯಾದಲ್ಲಿ ಸಮೂಹ ಸಂವಹನ ಶಿಕ್ಷಣ ಪಡೆಯುತ್ತಿದ್ರು. ಆದ್ರೆ ಅದನ್ನು ಅರ್ಧಕ್ಕೇ ಬಿಟ್ಟು ನಟನೆಯತ್ತ ಮುಖ ಮಾಡಿದ್ರು.

ರಿಚಾ ಛಡ್ಡಾ : ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ರಿಚಾ ಪದವಿ ಪಡೆದಿದ್ದಾರೆ.

ಜಾನ್ ಅಬ್ರಾಹಂ : ಮಾಡೆಲ್ ಹಾಗೂ ನಟ ಜಾನ್ ಮುಂಬೈನ ಜೈ ಹಿಂದ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲ ಎಂಇಟಿಯಲ್ಲಿ ಸ್ನಾತಕೋತ್ತರ ಪದವಿಗೂ ಭಾಜನರಾಗಿದ್ದಾರೆ.

ಸಿದ್ದಾರ್ಥ್ : ರಂಗ್ ದೇ ಬಸಂತಿ ಖ್ಯಾತಿಯ ಸಿದ್ಧಾರ್ಥ್ ದೆಹಲಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮುಂಬೈನಲ್ಲಿ ಎಂಬಿಎ ಮುಗಿಸಿದ್ದಾರೆ.

ಪ್ರೀತಿ ಜಿಂಟಾ : ಬಾಲಿವುಡ್ ನ ಡಿಂಪಲ್ ಬ್ಯೂಟಿ ಪ್ರೀತಿ ಜಿಂಟಾ ಇಂಗ್ಲಿಷ್ ವಿಷಯದಲ್ಲಿ ಪದವಿ ಹಾಗೂ ಕ್ರಿಮಿನಲ್ ಸೈಕಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ.

ಅಭಿಷೇಕ್ ಬಚ್ಚನ್ : ಬಿಗ್ ಬಿ ಪುತ್ರ ಅಭಿಷೇಕ್, ಜಮ್ನಾಬಾಯಿ ನರ್ಸೀ ಸ್ಕೂಲ್, ಮುಂಬೈನ ಬಾಂಬೆ ಸ್ಕಾಟಿಶ್ ಸ್ಕೂಲ್, ದೆಹಲಿಯ ಮಾಡರ್ನ್ ಸ್ಕೂಲ್ ಹಾಗೂ ಸ್ವಿಡ್ಜರ್ಲೆಂಡ್ ನ ಏಗ್ಲೊನ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ.

ಫರ್ಹಾನ್ ಅಖ್ತರ್ : ಇನ್ನು ನಟ ಫರ್ಹಾನ್ ಅಖ್ತರ್ ಮುಂಬೈನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಮುಗಿಸಿದ್ದಾರೆ.

ಅಮೀಶಾ ಪಟೇಲ್ : ಮಸಾಚುಸೆಟ್ಸ್ ನ ಟಫ್ಟ್ಸ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಅಮೀಶಾ ಚಿನ್ನದ ಪದಕ ಪಡೆದಿದ್ದಾರೆ. ಬೋಸ್ಟನ್ ಯೂನಿವರ್ಸಿಟಿಯಲ್ಲೂ ಅಮೀಶಾ ಪದವಿ ಗಳಿಸಿದ್ದಾರೆ.

ಸೋನಂ ಕಪೂರ್ : ಸಿಂಗಾಪುರದಲ್ಲಿ ಸೋನಂ ಉನ್ನತ ಶಿಕ್ಷಣ ಮುಗಿಸಿದ್ದಾರೆ. ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್ ನಲ್ಲೂ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಅನುಷ್ಕಾ ಶರ್ಮಾ : ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅನುಷ್ಕಾ ಶರ್ಮಾ ಪದವಿ ಮುಗಿಸಿದ್ದಾರೆ. ಸದ್ಯ ಕರೆಸ್ಪಾಂಡೆನ್ಸ್ ಮೂಲಕ ಅರ್ಥಶಾಸ್ತ್ರ ವಿಷಯದ ಮೇಲೆ ಮಾಸ್ಟರ್ಸ್ ಮಾಡ್ತಿದ್ದಾರೆ.

ಕರೀನಾ ಕಪೂರ್ : ಕರೀನಾ ಕೂಡ ಓದಿನಲ್ಲಿ ಮುಂದಿದ್ರು. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಮೈಕ್ರೋ ಕಂಪ್ಯೂಟರ್ಸ್ ವಿಷಯದ ಮೇಲೆ 3 ತಿಂಗಳ ಕೋರ್ಸ್ ಕೂಡ ಮುಗಿಸಿದ್ದಾರೆ.

ಐಶ್ವರ್ಯಾ ರೈ : ನಟಿ ಐಶ್ವರ್ಯಾ ರೈ ಬೋರ್ಡ್ ಎಕ್ಸಾಮ್ ಗಳಲ್ಲಿ ಶೇ.90ರಷ್ಟು ಅಂಕ ಪಡೆಯುತ್ತಿದ್ರು. ಆರ್ಕಿಟೆಕ್ಚರ್ ವಿಷದಲ್ಲಿ ಐಶೂ ಪದವಿ ಪಡೆದಿದ್ದಾರೆ.

ಇನ್ನು ಮೆನನ್ ಮುಂಬೈ ವಿವಿಯಲ್ಲಿ ಭೌತಶಾಸ್ತ್ರ ಪದವಿ ಪಡೆದಿದ್ರು. ನಂತರ ಪುಣೆಯಲ್ಲಿ ಎಂಬಿಎ ಮುಗಿಸಿದ್ದಾರೆ. ನಟ ರಣದೀಪ್ ಹೂಡಾ ಕೂಡ ಸ್ನಾತಕೋತ್ತರ ಪದವೀಧರರು. ನಟ ರಣವೀರ್ ಸಿಂಗ್ ಅಮೆರಿಕದ ಇಂಡಿಯಾನಾ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...