alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭ್ರಮಾಚರಣೆ ಸಂದರ್ಭದಲ್ಲಿ ಶಾರುಕ್ ಗೆ ಮುತ್ತಿಕ್ಕಿದ ಖ್ಯಾತ ನಟಿಯರು

ಬಾಲಿವುಡ್ ನಲ್ಲಿ ಭಾರಿ ಛಾಪು‌ ಮೂಡಿಸಿದ್ದ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ರಿಲೀಸ್ ಆಗಿ ಎರಡು ದಶಕ ಕಳೆದ ಬೆನ್ನಲ್ಲೆ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಚಿತ್ರದ ನಿರ್ದೇಶಕ ಕರಣ್ ಜೋಹಾರ್ ಆಯೋಜಿಸಿದ್ದರು.

ಚಿತ್ರ ತೆರೆ ಕಂಡು 20 ವರ್ಷ ಮುಗಿದ ಸಂಭ್ರಮಾಚರಣೆಗೆ ಆಯೋಜಿಸಿದ್ದ ಹೈಕ್ಲಾಸ್ ಪಾರ್ಟಿಯಲ್ಲಿ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದ ಶಾರುಕ್ ಖಾನ್, ಕಾಜೋಲ್ ಹಾಗೂ ರಾಣಿ‌ ಮುಖರ್ಜಿ ಸೇರಿದಂತೆ ಕೆಲ ಬಾಲಿವುಡ್ ಮಂದಿ ಭಾಗವಹಿಸಿದ್ದರು.

ಕುಚ್ ಕುಚ್ ಹೋತಾ ಹೇ ಚಿತ್ರದ ಮೂಲಕ, ನಿರ್ದೇಶಕನಾಗಿ ಕಾಲಿಟ್ಟ ಕರಣ್ ಜೋಹರ್ ಮಾತನಾಡಿದ್ದು, ಚಿತ್ರ‌ ಆರಂಭಿಸುವ ವೇಳೆ ಶಾರುಕ್ ಖಾನ್ ಅವರು ಅನೇಕ ಬಾರಿ ನನಗೆ ವಿಶ್ವಾಸ ಮೂಡಿಸಿದರು. ಇದರೊಂದಿಗೆ ಚಿತ್ರ ಆರಂಭದ ವೇಳೆ ಹಾಡಿದ್ದರೆ, ಸಿನಿಮಾ ನೋಡುವವರಿಗೆ ಉತ್ತಮ ವಾತಾವರಣ ಮೂಡುತ್ತದೆ ಎಂದಿದ್ದರು ಎಂದು ನೆನಪಿಸಿಕೊಂಡರು.

ಇದರೊಂದಿಗೆ ಚಿತ್ರೀಕರಣದ ಮೊದಲು‌, ಸೆಟ್ ನಲ್ಲಿ ಉತ್ತಮ ವಾತಾವರಣವಿದ್ದರೆ,‌ ಚಿತ್ರೀಕರಣದಲ್ಲಿಯೂ ಹಾಗೂ ಸಿನಿಮಾದಲ್ಲಿಯೂ ಉತ್ತಮ‌ ನಟನೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...