alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಶಾಕಿಂಗ್ ಸುದ್ದಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಬಿಡುಗಡೆಗೊಂಡಿದ್ದು, ಆರಂಭಿಕ ವಿಘ್ನಗಳ ನಂತರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ರಜನಿ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಕಡೆ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಆದರೆ ಈ ಚಿತ್ರದ ಕುರಿತು ಬಹಿರಂಗೊಂಡಿರುವ ಮಾಹಿತಿಯೊಂದು ರಜನಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಈಗ ಬಿಡುಗಡೆಗೊಂಡಿರುವ ‘ಕಾಲಾ’ ಚಿತ್ರದ ಹಿಂದಿ ಅವತರಣಿಕೆ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದಿರುವ ಕಾರಣ 2.0 ಚಿತ್ರ ಖರೀದಿಸಲು ವಿತರಕರು ಹಿಂದೆ ಮುಂದೆ ನೋಡುತ್ತಿದ್ದಾರಂತೆ.

ಬಾಲಿವುಡ್ ನಲ್ಲಿ ರಜನಿ ಚಿತ್ರಗಳು ಹೆಚ್ಚೇನು ಗಳಿಕೆ ಮಾಡುತ್ತಿರಲಿಲ್ಲವಾದರೂ ‘ಕಾಲಾ’ ಈ ಹಿಂದಿನ ರಜನಿ ಚಿತ್ರಗಳಿಗಿಂತ ಗಳಿಕೆಯಲ್ಲಿ ಹಿಂದೆ ಬಿದ್ದಿರುವುದು ವಿತರಕರನ್ನು ಕಂಗೆಡಿಸಿದೆಯಂತೆ.

ಭಾರತೀಯ ಚಿತ್ರರಂಗದಲ್ಲೇ 2.0 ಅತಿ ಹೆಚ್ಚು ಬಜೆಟ್ ನ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದ್ದು, ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದರೂ ಅವರದು ಖಳನಾಯಕನ ಪಾತ್ರವಾಗಿರುವ ಕಾರಣ ಬಾಲಿವುಡ್ ವಿತರಕರು 2.0 ಚಿತ್ರ ವಿತರಣೆಗೆ ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...