alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿ ಚಿತ್ರದ ಗಳಿಕೆ ಕೇಳಿದ್ರೆ “ಶಾಕ್” ಆಗ್ತೀರಾ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯದ ‘2.0’ ಚಿತ್ರದ ಮೊದಲ ವಾರದ ಗಳಿಕೆ ಬಾಕ್ಸಾಫೀಸ್ ಪಂಡಿತರನ್ನು ನಿಬ್ಬೆರಗುಗೊಳಿಸಿದೆ.

ಬಿಡುಗಡೆಗೂ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ, ಮೊದಲ ವಾರದಲ್ಲೇ ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ನವೆಂಬರ್ 29 ರಂದು ಬಿಡುಗಡೆಯಾಗಿದ್ದ ಈ ಚಿತ್ರ, ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದ ‘ಬಾಹುಬಲಿ’ಯನ್ನು ಗಳಿಕೆಯಲ್ಲಿ ಮೀರಿಸಿತ್ತು. ಚಿತ್ರದ ನಾಗಾಲೋಟವನ್ನು ಗಮನಿಸಿದರೆ ಹತ್ತಾರು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಪಂಡಿತರು ಹೇಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...