alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಇಲ್ಲಿಯವರೆಗೆ ಗಳಿಸಿರೋದೆಷ್ಟು ಗೊತ್ತಾ..?

baahubali-1468ಕಳೆದ ವರ್ಷ (ಜುಲೈ 10, 2015) ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಗಳಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆ ಮಾಡಿದೆ. ಯಾವುದೇ ಹಾಲಿವುಡ್ ಚಿತ್ರಗಳಿಗಿಂತ ಕಡಿಮೆಯಿಲ್ಲದಂತೆ ನಿರ್ಮಾಣವಾಗಿದ್ದ ಪ್ರಾದೇಶಿಕ ಭಾಷೆಯ ಈ ಚಿತ್ರ ಗಳಿಕೆಯಲ್ಲಿ ಬಾಲಿವುಡ್ ಚಿತ್ರಗಳ ಸರಿಸಮಾನವಾಗಿ ನಿಂತಿದೆ.

‘ಬಾಹುಬಲಿ’ ಇದುವರೆಗೂ 600 ಕೋಟಿ ರೂ. ಗಳನ್ನು ಗಳಿಕೆ ಮಾಡಿದೆ ಎನ್ನಲಾಗಿದ್ದು, ಬಾಲಿವುಡ್ ನ ಅತಿರಥ, ಮಹಾರಥರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಚಿತ್ರಗಳ ಗಳಿಕೆಯ ಸ್ಥಾನದಲ್ಲಿ ನಿಂತಿದೆ.

‘ಬಾಹುಬಲಿ’ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ‘500 ಕೋಟಿ ಕ್ಲಬ್’ ಸೇರಿದ ಕಿರಿ ವಯಸ್ಸಿನ ನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಬಾಹುಬಲಿ’ ಚಿತ್ರದ ಯಶಸ್ಸಿನ ನಾಗಾಲೋಟ ಇನ್ನೂ ಮುಂದುವರೆದಿದ್ದು, ಚೀನಾದ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಇದು ಬಿಡುಗಡೆಗೊಳ್ಳುತ್ತಿದೆ.

ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಹತ್ಯೆ ಮಾಡಿದ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಇನ್ನೂ ಪ್ರೇಕ್ಷಕರ ಮನದಲ್ಲಿ ಕೊರೆಯುತ್ತಿದ್ದು, ಅದಕ್ಕೆ 2017 ರಲ್ಲಿ ಬಿಡುಗಡೆಯಾಗಲಿರುವ ‘ಬಾಹುಬಲಿ 2’ ರಲ್ಲಿ ಉತ್ತರ ಸಿಗಬಹುದೆಂದು ಹೇಳಲಾಗುತ್ತಿದೆ. ಅದೇನೇ ಇರಲಿ, ಪ್ರಾದೇಶಿಕ ಭಾಷೆಯ ಚಿತ್ರವೊಂದು ಈ ಮಟ್ಟಿಗಿನ ಯಶಸ್ಸು ಕಂಡಿರುವುದು ಅಚ್ಚರಿಯೇ ಸರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...