alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ನೋಡಲು ಬಂದವನು ಮಾಡಿದ್ದೇನು ಗೊತ್ತಾ?

1998 ರಲ್ಲಿ ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋಧ್ಪುರ್ ನ್ಯಾಯಾಲಯದಿಂದ 5 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಎರಡು ದಿನಗಳ ಕಾಲ ಜೋಧ್ಪುರ ಕಾರಾಗೃಹದಲ್ಲಿದ್ದ ಸಲ್ಮಾನ್ ಖಾನ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಸಹೋದರಿಯರಾದ ಅಲ್ವಿರಾ ಹಾಗೂ ಅರ್ಪಿತಾ ಜೊತೆ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು.

ಸಲ್ಮಾನ್ ಖಾನ್ ಬಿಡುಗಡೆಯಾಗುತ್ತಿದ್ದಂತೆಯೇ ಅವರ ಚಿತ್ರಗಳ ಮೇಲೆ ಬಂಡವಾಳ ಹೂಡಿದ್ದ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರೆ ಅಭಿಮಾನಿಗಳು ಸಂತಸದಿಂದ ಕುಣಿದಾಡಿದ್ದರು. ಸಲ್ಮಾನ್ ಮುಂಬೈನ ತಮ್ಮ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಆಗಮಿಸಿದ ವೇಳೆ ಸಾವಿರಾರು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದರು.

ಆದರೆ ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡವನೊಬ್ಬ ಗುಂಪಿನಲ್ಲಿ ಸೇರಿಕೊಂಡು ಬರೋಬ್ಬರಿ 12 ಮೊಬೈಲ್ ಗಳನ್ನು ಕದ್ದಿದ್ದಾನೆ. ಬಾಂದ್ರಾ ನಿವಾಸಿ 19 ವರ್ಷದ ವಿಶಾಲ್ ಯಾದವ್ ಮೊಬೈಲ್ ಕಳವು ಮಾಡಿ ಸಿಕ್ಕಿ ಬಿದ್ದ ಆರೋಪಿಯಾಗಿದ್ದು, ಈತ ಶನಿವಾರದಂದು ಸಲ್ಮಾನ್ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳ ನಡುವೆ ನುಸುಳಿಕೊಂಡಿದ್ದ. ಬಳಿಕ ಮೊಬೈಲ್ ಗಳನ್ನು ಕಳವು ಮಾಡಿದ್ದು, ಮೊಬೈಲ್ ಕಳೆದುಕೊಂಡಿದ್ದ ಅಸ್ಲಾಂ ಖಾನ್ ಎಂಬವರು ದೂರು ದಾಖಲಿಸಿದ್ದ ವೇಳೆ ವಿಶಾಲ್ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...