alex Certify
ಕನ್ನಡ ದುನಿಯಾ       Mobile App
       

Kannada Duniya

ಇವರುಗಳ ಫೋಟೋ ನೋಡಿದ್ರೆ ನೀವೇನಂತಿರೋ…!

ಒಬ್ಬರಂತೆಯೇ ಇನ್ನೊಬ್ಬರಿರುವುದನ್ನು ಅವಳಿಗಳು ಎಂದು ಕರೆಯುತ್ತಾರೆ. ಅವಳಿಗಳ ಹೊರತಾಗಿಯೂ ಜಗತ್ತಿನಲ್ಲಿ ಒಬ್ಬರಂತೆ 7 ವ್ಯಕ್ತಿಗಳಿರುತ್ತಾರೆ ಎಂಬ ಮಾತಿದೆ.

ಬಾಲಿವುಡ್‌ ನಟ-ನಟಿಯರನ್ನೇ ಹೋಲುವಂತಹ ವ್ಯಕ್ತಿಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿ ಗುರುತಿಸಲಾಗಿದೆ. ಬಾಲಿವುಡ್‌ ತಾರೆಯರನ್ನು ಹೋಲುವ ಅನೇಕ ಮಂದಿ ಈಗ ಸುದ್ದಿಯಾಗಿದ್ದಾರೆ.

ಸದಾ ಒಂದಿಲ್ಲೊಂದು ಹೊಸ ವಿಚಾರಕ್ಕೆ ಪ್ರಚಾರದಲ್ಲಿರುವ ಬಾಲಿವುಡ್‌ ನಿರ್ದೇಶಕ ಕರಣ್‌ಜೋಹರ್ ಈ ವಿಚಾರದಲ್ಲೂ ಮುಂದಿದ್ದಾರೆ. ತಮ್ಮಂತೆಯೇ ಕಾಣುವ ವ್ಯಕ್ತಿಯ ಫೋಟೋವನ್ನು ಟ್ವಿಟರ್‌ ಮೂಲಕ ಅವರು ಶೇರ್‌ ಮಾಡಿದ್ದಾರೆ. ಕರಣ್‌ ಜೋಹರ್‌ನಂತೆ ಕಾಣುವ ಉಸ್ಮಾನ್‌ ಖಾನ್‌ ಎಂಬ ವ್ಯಕ್ತಿಯ ಫೋಟೋವನ್ನು ಕರಣ್‌ ಟ್ವೀಟ್‌ ಮಾಡಿದ್ದಾರೆ.

ಲಿಪ್‌ ಟು ಲಿಪ್‌ ಕಿಸ್ಸಿಂಗ್‌ ಸೀನ್‌ಗಳಲ್ಲಿ ಹೆಸರು ಗಳಿಸಿದ್ದ ಇಮ್ರಾನ್‌ ಹಶ್ಮಿಯ ಡಿಟ್ಟೋ ಇಂಡಿಯಾ ಗಾಟ್‌ ಟಾಲೆಂಟ್‌ ಎಂಬ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಸಚಿನ್‌ ಟಕ್ಕರ್‌ ಎಂಬ ಈತ, ಇಮ್ರಾನ್‌ನ ದೊಡ್ಡ ಅಭಿಮಾನಿ. ಇಮ್ರಾನ್‌ನಂತೆಯೇ ವರ್ತಿಸುವಲ್ಲೂ ಈತ ನಿಸ್ಸೀಮ ಎಂದು ಟಿವಿ ಶೋನಲ್ಲಿ ಗೊತ್ತಾಗಿತ್ತು.

ಹಸೆಮಣೆಗೆ ಏರಲಿರುವ ಬೆಡಗಿ ಪ್ರಿಯಾಂಕ ಚೋಪ್ರಾಗೆ ತನ್ನ ಪ್ರತಿರೂಪವನ್ನು ಕಂಡು ಆಶ್ಚರ್ಯವಾಗಿದೆಯಂತೆ! ಯೂಟ್ಯೂಬ್‌ ಸ್ಟಾರ್‌ ನವಪ್ರೀತ್‌ ಹಾಗೂ ಪ್ರಿಯಾಂಕ ಚೋಪ್ರಾ ಇಬ್ಬರೂ ಹತ್ತಿರ ನಿಂತರೆ ನೀವು ಕನ್‌ಫ್ಯೂಸ್‌ ಆಗೋದು ಖಚಿತ!

ಇವರಷ್ಟೇ ಅಲ್ಲ, ಶಾರುಕ್ ಖಾನ್‌, ಅಮಿರ್‌ ಖಾನ್‌, ರಣಬೀರ್ ಕಪೂರ್, ಅಜಯ್‌ ದೇವಗನ್‌ ಸೇರಿ ಅನೇಕ ಮಂದಿಯನ್ನು ಹೋಲುವ ವ್ಯಕ್ತಿಗಳ ಫೋಟೋಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ನಟ ಸೈಫ್‌ ಅಲಿ ಖಾನ್‌ ಕೆಲ ಸಮಯದ ಹಿಂದೆ ಪೆಟ್ರೋಲ್‌ ಬಂಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ ಆ ಬಳಿಕ ಅದು ಅವರಂತೆಯೇ ಹೋಲುವ ವ್ಯಕ್ತಿ ಎಂದು ಗೊತ್ತಾಗಿತ್ತು !

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...