alex Certify
ಕನ್ನಡ ದುನಿಯಾ       Mobile App
       

Kannada Duniya

‘ನಾನು 103 ನಾಟ್ ಔಟ್’ ಅಂದ್ರು ಬಿಗ್ ಬಿ ಅಭಿಮಾನಿ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಹಿರಿಯ ನಟ ರಿಷಿ ಕಪೂರ್ 27 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಮೇಶ್ ಶುಕ್ಲಾ ನಿರ್ದೇಶನದಲ್ಲಿ ಮೂಡಿ ಬಂದಿರುವ ‘102 ನಾಟ್ ಔಟ್’ ಚಿತ್ರದಲ್ಲಿ ಇಬ್ಬರು ದಿಗ್ಗಜರ ಸಮಾಗಮವಾಗಿದೆ.

102 ವರ್ಷದ ತಂದೆ ಹಾಗೂ 74 ವರ್ಷದ ಮಗನ ಕುರಿತಾಗಿನ ಚಿತ್ರ ಇದೆಂದು ಹೇಳಲಾಗಿದ್ದು, ಮೇ 4 ರಂದು ದೇಶ-ವಿದೇಶಗಳಲ್ಲಿ ತೆರೆ ಕಾಣಲಿದೆ. ಬಾಲಿವುಡ್ ನ ಮೇರು ನಟರಿಬ್ಬರ ಅಭಿನಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದಿದ್ದು, ಚಿತ್ರದ ಸ್ಕ್ರೀನಿಂಗ್ ವೀಕ್ಷಿಸಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಮಧ್ಯೆ ಬಿಗ್ ಬಿ ಅಮಿತಾಬ್ ಬಚ್ಚನ್ ರ ಅಭಿಮಾನಿಯಾಗಿರುವ 103 ವರ್ಷದ ವೃದ್ದೆಯೊಬ್ಬರು ಚಿತ್ರಕ್ಕೆ ಶುಭ ಕೋರಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ”ಹಲೋ ಅಮಿತಾಬ್, ಗುಡ್ ಲಕ್ ಟು ‘102 ನಾಟ್ ಔಟ್’. ಐ ಯಾಮ್ 103 ನಾಟ್ ಔಟ್’ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತಃ ಅಮಿತಾಬ್ ಕೂಡಾ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಶುಭ ಕೋರಿದ ವೃದ್ದೆಗೆ ಧನ್ಯವಾದ ಅರ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...