alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯೆಯಲ್ಲಿ ಹಿಂದೆ ಬಿದ್ದಿಲ್ಲ ಈ ಬಾಲಿವುಡ್ ಸ್ಟಾರ್ಸ್

pariniti-chopraಬಾಲಿವುಡ್ ತಾರೆಗಳೆಲ್ಲ ಚಿಕ್ಕ ವಯಸ್ಸಿನಿಂದ್ಲೇ ನಟನೆಯತ್ತ ಮುಖ ಮಾಡಿದವರಲ್ಲ. ಓದಿದ್ದೇ ಒಂದು, ಮಾಡ್ತಿರೋದು ನಟನೆ ಎಂಬ ಸ್ಥಿತಿ ಹಲವರದ್ದು. ಅದೆಷ್ಟೋ ನಟ, ನಟಿಯರು ಉನ್ನತ ಶಿಕ್ಷಣ ಪಡೆದಿದ್ದಾರೆ.

ರಿಚಾ ಛಡ್ಡಾ : 2002 ರಲ್ಲಿ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮುಗಿಸಿದ ರಿಚಾ ಛಡ್ಡಾ, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಇಮ್ರಾನ್ ಖಾನ್ : ಇಮ್ರಾನ್ ಫ್ರಿಮಾಂಟ್ ಹೈಸ್ಕೂಲ್ ನಲ್ಲಿ ಓದಿದವರು. ನಂತರ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ, ಫಿಲ್ಮ್ ಮೇಕಿಂಗ್ ವಿಷಯದಲ್ಲಿ ಪದವಿ ಸಂಪಾದಿಸಿದ್ದಾರೆ.

ಪರಿಣಿತಿ ಚೋಪ್ರಾ : ಪರಿಣಿತಿ ಒಂದಲ್ಲ, ಎರಡಲ್ಲ, ಮೂರು ಪದವಿ ಪಡೆದಿದ್ದಾರೆ. ಬ್ಯುಸಿನೆಸ್, ಫೈನಾನ್ಸ್ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಪದವಿ ಗಳಿಸಿದ್ದಾರೆ.

ಸೋಹಾ ಅಲಿ ಖಾನ್ : ಆಕ್ಸ್ ಫರ್ಡ್ ನ ಬಲ್ಲಿಯೊಲ್ ಕಾಲೇಜಿನಲ್ಲಿ ಸೋಹಾ, ಆಧುನಿಕ ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ. ಅಂತರಾಷ್ಟ್ರೀಯ ಸಂಬಂಧಗಳು ಎಂಬ ವಿಷಯದ ಮೇಲೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ.

ಸೋನು ಸೂದ್ : ಸೋನು, ಎಲೆಕ್ಟ್ರಿಕಲ್ ಎಂಜಿನಿಯರ್. ನಾಗ್ಪುರದ ಯಶ್ವಂತರಾವ್ ಚೌಹಾಣಾ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಆರ್. ಮಾಧವನ್ : ಇವರು ಎಲೆಕ್ಟ್ರಾನಿಕ್ಸ್ ಪದವೀಧರರು, ಅಷ್ಟೇ ಅಲ್ಲ ಸೇನೆ, ನೌಕಾಪಡೆ ಮತ್ತು ಪಾಯುಪಡೆಯ ತರಬೇತಿಯನ್ನೂ ಪಡೆದಿದ್ದಾರೆ.

ಪ್ರೀತಿ ಝಿಂಟಾ : ಪ್ರೀತಿ ಉನ್ನತ ಶಿಕ್ಷಣ ಮುಗಿಸಿದ್ದು ಶಿಮ್ಲಾದಲ್ಲಿ. ಸೇಂಟ್ ಬಿಡೆಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಜಾನ್ ಅಬ್ರಾಹಂ : ಅರ್ಥಶಾಸ್ತ್ರ ಪದವೀಧರರಾಗಿರುವ ಜಾನ್, ನರ್ಸೀಮೊಂಜೀ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಎಂಬಿಎ ಮುಗಿಸಿದ್ದಾರೆ.

ವಿದ್ಯಾ ಬಾಲನ್ : ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪದವಿ ಪಡೆದಿರುವ ವಿದ್ಯಾ ಬಾಲನ್, ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ಸ್ ಡಿಗ್ರಿ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ : ಬಿಗ್ ಬಿ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...