alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ಪೊಲೀಸರ ಕ್ಷಮೆ ಕೇಳಿದ ನಟ

ಬಾಲಿವುಡ್ ನಟ ಕುಣಾಲ್ ಖೇಮು ಮುಂಬೈನಲ್ಲಿ ಬೈಕ್ ಸವಾರಿ ಮಾಡಿದ್ದಾರೆ. ಆದ್ರೆ ಹೆಲ್ಮೆಟ್ ಹಾಕದೇ ಸ್ಟೈಲಾಗಿ ಟೋಪಿ ಧರಿಸಿ ಹೊರಟಿದ್ರು ಕುಣಾಲ್. ಕುಣಾಲ್ ಫೋಟೋ ಕ್ಲಿಕ್ಕಿಸಿದ ಸಾರ್ವಜನಿಕರು ಅದನ್ನು, ಮುಂಬೈ ಪೊಲೀಸರಿಗೂ ಟ್ಯಾಗ್ ಮಾಡಿದ್ದರು.

ಕೊನೆಗೆ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಖುದ್ದು ಕುಣಾಲ್ ಖೇಮು ಮುಂಬೈ ಪೊಲೀಸರ ಬಳಿ ಟ್ವಿಟ್ಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ. ನನಗೆ ಬೈಕ್ ಓಡಿಸೋದು ಇಷ್ಟ, ಆದ್ರೆ ಹೆಲ್ಮೆಟ್ ಧರಿಸದೇ ಇದ್ದಿದ್ದು ನನ್ನ ತಪ್ಪು. ಜನರಿಗೆ ತಪ್ಪು ಮಾದರಿಯಾಗಲು ತಾವು ಬಯಸುವುದಿಲ್ಲ ಅಂತಾ ಕುಣಾಲ್ ಟ್ವೀಟ್ ಮಾಡಿದ್ದರು.

ಇದಕ್ಕೆ ಮುಂಬೈ ಪೊಲೀಸರು ಸಹ ಸರಿಯಾಗೇ ಉತ್ತರ ಕೊಟ್ಟಿದ್ದಾರೆ. ನಿಮಗೆ ಬೈಕ್ ಇಷ್ಟ, ನಮಗೆ ಜನರ ಸುರಕ್ಷತೆ ಮುಖ್ಯ. 500 ರೂಪಾಯಿ ದಂಡ ಕಟ್ಟಿ, ಚಲನ್ ಕಳಿಸಿದ್ದೇವೆ ಅಂತಾ ಕುಣಾಲ್ ಗೆ ಪ್ರತಿಕ್ರಿಯಿಸಿದ್ದಾರೆ. ದಂಡ ಕಟ್ಟಲು ಕುಣಾಲ್ ಒಪ್ಪಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...