alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ 2 ಚಿತ್ರಕ್ಕಾಗಿ ಪ್ರಭಾಸ್ ವರ್ಕ್ ಔಟ್– ಏರಲಿದೆ 150 ಕೆಜಿ ತೂಕ

prabhash1-580x395

‘ಬಾಹುಬಲಿ 2’ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. 2015ರ ಬ್ಲಾಕ್ ಬಾಸ್ಟರ್ ಚಿತ್ರ ‘ಬಾಹುಬಲಿ’ ಸೀಕ್ವೆಲ್ ‘ಬಾಹುಬಲಿ -2’ ಹೇಗಿರುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಸಾಯಿಸ್ತಾನೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು.

ಇನ್ನು ಈ ಚಿತ್ರದ ಹೈಲೈಟ್ ನಟ ಪ್ರಭಾಸ್.  ಭಾರತೀಯ ಸಿನಿಮಾ ರಂಗದಲ್ಲಿ ಈವರೆಗೂ ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ್ದಾರೆ ಪ್ರಭಾಸ್. ತನ್ನ ತೂಕವನ್ನು 150 ಕೆ.ಜಿ ಏರಿಸಿಕೊಳ್ತಿದ್ದಾರೆ. ‘ಬಾಹುಬಲಿ 2’ ಗಾಗಿ ಪ್ರಭಾಸ್ ಈಗಾಗಲೇ 130 ಕೆ.ಜಿ ತೂಕ ಏರಿಸಿಕೊಂಡಿದ್ದಾರೆ. ಇನ್ನು 20 ಕೆ.ಜಿ ಮಾತ್ರ ಬಾಕಿ ಇದೆ.

ಮೂಲಗಳ ಪ್ರಕಾರ ಪ್ರಭಾಸ್, ಇಬ್ಬರು ಟ್ರೈನರ್ ಹಾಗೂ ಡಯಟೀಶಿಯನ್ ಹೊಂದಿದ್ದಾರೆ. ಪ್ರತಿ ದಿನ 5 ಗಂಟೆ ಜಿಮ್ ನಲ್ಲಿ ಕಳೆಯುತ್ತಾರಂತೆ. ತೂಕ ಹೆಚ್ಚಿಸಿಕೊಳ್ಳಲು ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಪ್ರಭಾಸ್. ದಿನಕ್ಕೆ 50 ಮೊಟ್ಟೆ, ಅರ್ಧ ಕೆ.ಜಿ ಚಿಕನ್, ಬ್ರೌನ್ ರೈಸ್, ಸಲಾಡ್ ಹಾಗೂ ಹಣ್ಣನ್ನು ತಿನ್ನುತ್ತಿದ್ದಾರೆ.

ಕೇವಲ ಪ್ರಭಾಸ್ ಒಂದೇ ಅಲ್ಲ, ಚಿತ್ರದ ಇನ್ನೂ ಅನೇಕ ನಟರು ತಮ್ಮ ತೂಕ ಏರಿಸಿಕೊಳ್ಳುವ, ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...