alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಕ್ಷಕರ ಮನಗೆದ್ದ ಪಶ್ಮಿನಾ ಸಾಂಗ್

songಬಾಲಿವುಡ್ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು ‘ಫಿತೂರ್’. ಆದಿತ್ಯ ರಾಯ್ ಕಪೂರ್ ಹಾಗೂ ಕತ್ರಿನಾ ಕೈಫ್ ಟ್ರೈಲರ್, ಪೋಸ್ಟರ್ ಮೂಲಕ ಈಗಾಗಲೇ ಮೋಡಿ ಮಾಡಿದ್ದರು. ಈಗ ಹಾಡಿನ ಸರದಿ.

ಚಿತ್ರದ ಮೊದಲ ಹಾಡನ್ನು ಚಿತ್ರ ತಂಡ ರಿಲೀಸ್ ಮಾಡಿದೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಪಶ್ಮಿನಾ ಹಾಡು, ಚಳಿಗಾಲದಲ್ಲೂ ಅಭಿಮಾನಿಗಳಿಗೆ ಬೆವರು ಇಳಿಸ್ತಾ ಇದೆ. ಹಾಡಿನಲ್ಲಿ ಕತ್ರಿನಾ ಹಾಗೂ ಆದಿತ್ಯ ಕೆಮೆಸ್ಟ್ರಿ ಚೆನ್ನಾಗೆ ಮೂಡಿ ಬಂದಿದೆ.

ಅಭಿಷೇಕ್ ಕಪೂರ್ ನಿರ್ದೇಶನದ ಚಿತ್ರಕ್ಕಾಗಿ ಆದಿತ್ಯ ಸಖತ್ ವರ್ಕ್ ಔಟ್ ಮಾಡಿದ್ದಾರೆ. ಅನೇಕ ವರ್ಷಗಳ ನಂತರ ಟಬು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಮೊದಲು ರೇಖಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಚಿತ್ರದ ಕೆಲ ಶೂಟಿಂಗ್ ಕೂಡ ನಡೆದಿತ್ತು. ಆದ್ರೆ ಮಧ್ಯದಲ್ಲಿಯೇ ರೇಖಾ ಚಿತ್ರದಿಂದ ಹೊರನಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...