alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮಿಡಿ ಸ್ಟಾರ್ ಚಿಕ್ಕಣ್ಣ ಯಶಸ್ಸಿಗೆ ಇಲ್ಲಿದೆ ಕಾರಣ

chikkanna

ಸದ್ಯ ಬಿಡುಗಡೆಯಾದ ಮತ್ತು ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಲ್ಲಿ ಬಹುತೇಕ ಎಲ್ಲಾ ಚಿತ್ರಗಳಲ್ಲಿಯೂ ಕಾಣಸಿಗುವ ಏಕೈಕ ನಟ ಎಂದರೆ ಕಾಮಿಡಿ ಸ್ಟಾರ್ ಚಿಕ್ಕಣ್ಣ.

ಹೀರೋ ಯಾರೇ ಇರಲಿ, ಸಿನಿಮಾದಲ್ಲಿ ಚಿಕ್ಕಣ್ಣ ಇರಲೇಬೇಕು. ಹೊಸಬರಿಂದ ಹಿಡಿದು ಸ್ಟಾರ್ ನಟರವರೆಗೆ ಚಿಕ್ಕಣ್ಣ ಅವರು ತಮ್ಮ ಚಿತ್ರದಲ್ಲಿ ಇರಲೇಬೇಕೆಂಬ ಬೇಡಿಕೆ ಇಡುತ್ತಾರೆ ಎನ್ನಲಾಗಿದೆ.

ಮಂಡ್ಯ ಜಿಲ್ಲೆಯವರಾದ ಚಿಕ್ಕಣ್ಣ ಆರಂಭದಲ್ಲಿ ಟಿವಿ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸಿದ್ದು, ರಾಕಿಂಗ್ ಸ್ಟಾರ್ ಯಶ್. ಹೌದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಿರಾತಕ’ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಚಿಕ್ಕಣ್ಣ ಬಣ್ಣ ಹಚ್ಚಿದರು. ಬಳಿಕ ಯಶ್ ಜೊತೆಗೆ ‘ರಾಜಾಹುಲಿ’ ಯಲ್ಲಿಯೂ ಮಿಂಚಿದ್ದರು. ಶರಣ್ ಅಭಿನಯದ ‘ಅಧ್ಯಕ್ಷ’ ದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷರಾಗಿ ಅಮೋಘ ಅಭಿನಯ ನೀಡಿದ್ದರು. ಚಿಕ್ಕಣ್ಣ ಮ್ಯಾನರಿಸಂ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿಬಿಟ್ಟಿದೆ.

ಕನ್ನಡದಲ್ಲಿ ಹಿಂದಿನಿಂದಲೂ ಹಾಸ್ಯನಟರ ಪರಂಪರೆಯೇ ಇದೆ. ಸಾಮಾಜಿಕ, ಕೌಟುಂಬಿಕ, ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ಹಾಸ್ಯ ಕಲಾವಿದರಿಗೆ ಪ್ರಾಧಾನ್ಯತೆ ಇರುತ್ತಿತ್ತು. ನರಸಿಂಹರಾಜು, ದಿನೇಶ್, ಮುಸುರಿ ಕೃಷ್ಣಮೂರ್ತಿ, ಉಮಾಶ್ರೀ, ಎನ್. ಎಸ್. ರಾವ್. ದೊಡ್ಡಣ್ಣ, ಶರಣ್, ಕೋಮಲ್, ಸಾಧುಕೋಕಿಲ ಸೇರಿದಂತೆ ಹಲವು ಕಲಾವಿದರು ಹಾಸ್ಯದಿಂದಲೇ ಮನೆಮಾತಾದವರು. ಈಗಂತೂ ಹೀರೋಗಳೇ ಹಾಸ್ಯಪ್ರಧಾನ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಶರಣ್, ಕೋಮಲ್  ಮೊದಲಾದವರು ನಾಯಕ ನಟರಾಗಿ ಬಡ್ತಿ ಪಡೆದಿದ್ದರಿಂದ ಚಿಕ್ಕಣ್ಣ ಅವರಿಗೆ ಬೇಡಿಕೆ ಬಂದಿದೆ. ಚಿಕ್ಕಣ್ಣ ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ, ವರ್ಷದ 360 ದಿನಗಳೂ ಕೂಡ ಚಿಕ್ಕಣ್ಣ ಕೆಲಸ ಮಾಡುತ್ತಾರೆ. ಯಶ್ ಜೊತೆಗೆ ಮೊದಲ ಚಿತ್ರದಲ್ಲಿ ನಟಿಸಿದ್ದ ಚಿಕ್ಕಣ್ಣ ಅವರ 50ನೇ ಚಿತ್ರ ಯಶ್ ಅವರೊಂದಿಗೆ ನಟಿಸಿದ ‘ಮಾಸ್ಟರ್ ಪೀಸ್’. ಹೌದು ಚಿಕ್ಕಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಕನ್ನಡದ ಬಹುಬೇಡಿಕೆಯ ಹಾಸ್ಯ ನಟರಾಗಿರುವ ಚಿಕ್ಕಣ್ಣ ಯಾವುದೇ ಹೀರೋಗಳಿಗೂ ಕಡಿಮೆ ಇಲ್ಲದಂತೆ ಜನಪ್ರಿಯರಾಗಿದ್ದಾರೆ. ಈಗಂತೂ ಕನ್ನಡದಲ್ಲಿ ಚಿಕ್ಕಣ್ಣ ಇಲ್ಲದಿರುವ ಸಿನಿಮಾಗಳೇ ಇಲ್ಲವೆನ್ನಬಹುದು. ಹಾಸ್ಯದಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಚಿಕ್ಕಣ್ಣ ನಿಜಕ್ಕೂ ಅದ್ಭುತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿದ್ದರೂ ಚಿಕ್ಕಣ್ಣ ತಮ್ಮ ಸರಳ ವ್ಯಕ್ತಿತ್ವದಿಂದಲೇ ಗಮನ ಸೆಳೆಯುತ್ತಾರೆ. ಯಾರಿಗೂ ಕಾಯಿಸದೇ ನಿಗದಿತ ವೇಳೆಗೆ ಶೂಟಿಂಗ್ ಸ್ಟಾಟ್ ಗೆ ಹೋಗುತ್ತಾರೆ. ತಮ್ಮ ಪಾಲಿನ ಕೆಲಸವನ್ನು ಕಾಳಜಿ ವಹಿಸಿ ಮುಗಿಸುತ್ತಾರೆ. ಹಾಗಾಗಿಯೇ ವರ್ಷ ಪೂರ್ತಿ ಅವರು ಬಿಡುವಿಲ್ಲದಂತೆ ನಟಿಸುತ್ತಾರೆ. ಜೊತೆಗೆ ಇಂದಿಗೂ ಅದೇ ವಿನಯವಂತಿಯನ್ನು ಉಳಿಸಿಕೊಂಡಿದ್ದಾರೆ. ಇದೇ ಚಿಕ್ಕಣ್ಣ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...