alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಚಿತ್ರಿಸಿಕೊಂಡ ಯುವಕ

rape on minor17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಈ ದೃಶ್ಯವನ್ನು ಚಿತ್ರಿಸಿಕೊಂಡಿದ್ದು, ಯಾರ ಬಳಿಯಾದರೂ ಅತ್ಯಾಚಾರದ ವಿಚಾರ ಬಾಯ್ಬಿಟ್ಟಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿದ್ದ ಪ್ರಕರಣ ಮುಜಫರ್ ನಗರದ ಪುರ್ಖಾಜಿ ಪಟ್ಟಣದಲ್ಲಿ ನಡೆದಿದೆ.

ಮಾರ್ಚ್ 13 ರಂದು ಈ ಘಟನೆ ನಡೆದಿದ್ದು, 25 ವರ್ಷದ ನದೀಂ ಎಂಬಾತ ಅಪ್ರಾಪ್ತೆಯನ್ನು ತನ್ನ ಸಹೋದರಿಯ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರವೆಸಗಿದ್ದಾನೆ. ಶಾಕಿಂಗ್ ಸಂಗತಿಯೆಂದರೆ ಯುವಕನ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದರು ಎಂದು ಹೇಳಲಾಗಿದೆ.

ಬಾಲಕಿ ಇದೀಗ ತನ್ನ ಪೋಷಕರ ಬಳಿ ಅಂದು ನಡೆದ ಘಟನೆಯನ್ನು ವಿವರಿಸಿದ್ದು, ನದೀಂ, ಆತನ ಸಹೋದರಿ ಅಫ್ಸಾನಾ, ತಂದೆ ಇಕ್ರಾಮ್ ಸೇರಿದಂತೆ ಐವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...