alex Certify
ಕನ್ನಡ ದುನಿಯಾ       Mobile App
       

Kannada Duniya

ಹಿರಿಯ ಸಹೋದರಿ ಎಂಎಂಎಸ್ ಮಾಡಿ ಕಿರಿಯ ಸಹೋದರಿಗೆ ಹಿಂಸೆ ನೀಡ್ತಿದ್ದ

ಎಂಎಂಎಸ್ ಮಾಡಿ ವಿದ್ಯಾರ್ಥಿನಿಯನ್ನು ಬೆದರಿಸುತ್ತಿದ್ದ ಆರೋಪಿಯೊಬ್ಬನನ್ನು ಗೋರಕ್ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೋಜ್ ಯಾದವ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಗೋರಕ್ಪುರ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರ ಮಗನಾಗಿರುವ ಆರೋಪಿ, ವಿದ್ಯಾರ್ಥಿನಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ.

ವಿದ್ಯಾರ್ಥಿನಿ ಸಹೋದರಿಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸುತ್ತಿದ್ದ ಮನೋಜ್, ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರಿಕಿರಿ ನೀಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ವಿದ್ಯಾರ್ಥಿನಿ ಅಧ್ಯಯನಕ್ಕಾಗಿ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರ ಮನೆಗೆ ಹೋಗ್ತಿದ್ದಳು ಎನ್ನಲಾಗಿದೆ. ಅಲ್ಲಿ ಮನೋಜ್ ಹಾಗೂ ವಿದ್ಯಾರ್ಥಿನಿ ಮಧ್ಯೆ ಸ್ನೇಹ ಬೆಳೆದಿದೆ.

ಮನೋಜ್ ಆಗಾಗ ವಿದ್ಯಾರ್ಥಿನಿ ಮನೆಗೆ ಬರ್ತಿದ್ದನಂತೆ. ವಿದ್ಯಾರ್ಥಿನಿ ಸಹೋದರಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಮನೋಜ್ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಮದುವೆಯಾಗುವಂತೆ ಪೀಡಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...