alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳೊಂದಿಗೆ ಯುವ ದಂಪತಿ ಆತ್ಮಹತ್ಯೆಗೆ ಶರಣು

ಹೈದರಾಬಾದ್ ನಲ್ಲೊಂದು ದಾರುಣ ಘಟನೆ ನಡೆದಿದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಯುವ ಉದ್ಯಮಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉದ್ಯಮಿ ಎಂ. ರಮೇಶ್ (30), ಆತನ ಪತ್ನಿ ಶಾಮಲ ಅಲಿಯಾಸ್ ಮಾನಸ (26) ಹಾಗೂ 6 ವರ್ಷದ ಪುತ್ರಿ ಗೀತಿಶ್ರೀ ಮತ್ತು 6 ತಿಂಗಳ ಮಗು ದಿವಿಜ ಸಾವನ್ನಪ್ಪಿದವರಾಗಿದ್ದಾರೆ.

ಸೋಮವಾರದಂದು ಘಾಟ್ ಕೇಸರ್ ನ ತಮ್ಮ ಮನೆಯಿಂದ ದಂಪತಿಗಳು ಹೊರ ಹೋಗಿದ್ದು, ಮರಳಿ ಬಾರದ ಕಾರಣ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದರು. ಬಳಿಕ ಹೈದರಾಬಾದ್ ನಿಂದ 35 ಕಿ.ಮೀ. ದೂರದಲ್ಲಿರುವ ಕೆರೆಯ ಬಳಿ ರಮೇಶ್ ನ ಬೈಕ್ ಕಂಡುಬಂದಿದೆ. ಅನುಮಾನಗೊಂಡು ಪರಿಶೀಲಿಸಿದ ವೇಳೆ ಕೆರೆಯಲ್ಲಿ ನಾಲ್ವರ ಶವ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೀಸಾರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...