alex Certify
ಕನ್ನಡ ದುನಿಯಾ       Mobile App
       

Kannada Duniya

ಮೂವರನ್ನು ಮದುವೆಯಾದವನಿಂದ ಆಘಾತಕಾರಿ ಕೃತ್ಯ

yadagir

ಯಾದಗಿರಿ: ಮೂವರನ್ನು ಮದುವೆಯಾಗಿದ್ದ ದುರುಳನೊಬ್ಬ 2 ನೇ ಪತ್ನಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಅಲ್ಲಿಪುರ ದೊಡ್ಡ ತಾಂಡಾ ನಿವಾಸಿ ಆಟೋ ಚಾಲಕ ವಿನಾಯಕ ಎಂಬಾತನೇ ಇಂತಹ ಕೃತ್ಯ ಎಸಗಿದ ಆರೋಪಿ. ಈತನಿಂದ ಮೊದಲ ಪತ್ನಿ ದೂರವಾಗಿದ್ದಾಳೆ.

ಆ ನಂತರ ಸಂಬಂಧಿಕಳಾಗಿದ್ದ ಯುವತಿಯನ್ನು ಮದುವೆಯಾದ ವಿನಾಯಕ, ಕೆಲ ಸಮಯದ ಬಳಿಕ ಮತ್ತೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ.

2 ನೇ ಪತ್ನಿ ಊರಿನಲ್ಲಿದ್ದರೆ, 3 ನೇ ಪತ್ನಿಯನ್ನು ಯಾದಗಿರಿಯ ಧಾರುನಾಯಕ್ ತಾಂಡಾದಲ್ಲಿಟ್ಟಿದ್ದಾನೆ. 2 ನೇ ಪತ್ನಿ ತನ್ನೊಂದಿಗೆ ಮಾತ್ರ ಸಂಸಾರ ನಡೆಸಬೇಕೆಂದು ಜಗಳವಾಡಿದ್ದರಿಂದ ಆಕೆಯನ್ನು ಕೊಲೆ ಮಾಡಿ ಶವವನ್ನು ಭೀಮಾ ನದಿಗೆ ಎಸೆದಿದ್ದಾನೆ ಎನ್ನಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...