alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿಯೊಳಗೆ ಹಾವು ಬಿಟ್ಟು ಮಹಿಳೆಯರು ಮಾಡಿದ್ದೇನು?

ಉತ್ತರಪ್ರದೇಶದ ರಾಂಪುರದಲ್ಲಿ ಇಬ್ಬರು ಮಹಿಳೆಯರು ಚಿನ್ನದಂಗಡಿಯೊಳಕ್ಕೆ ಹಾವು ಬಿಟ್ಟು, ಆಭರಣ ಕಳವು ಮಾಡಿದ್ದಾರೆ. ಪ್ರಿತೋಶ್ ಚಂಡಿವಾಲಾ ಎಂಬಾತ ಚಿನ್ನದಂಗಡಿ ಇಟ್ಕೊಂಡಿದ್ದ. ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಅಂಗಡಿಗೆ ಬಂದಿದ್ದಾರೆ. ಜೊತೆಯಲ್ಲಿ ಅವರು ಹಾವನ್ನೂ ತಂದಿದ್ದರು.

ಪ್ರಿತೋಶ್ ನ ಗಮನಕ್ಕೆ ಬಾರದಂತೆ ಹಾವನ್ನು ಅಂಗಡಿಯೊಳಕ್ಕೆ ಬಿಟ್ಟಿದ್ದಾರೆ. ಅಂಗಡಿಯೊಳಕ್ಕೆ ಹಾವು ಓಡಾಡ್ತಿರೋದನ್ನು ನೋಡಿ ಮಾಲೀಕ ಬೆದರಿ ಹೊರಕ್ಕೆ ಓಡಿದ್ದಾನೆ. ಅದೇ ಸಮಯದಲ್ಲಿ ಮಹಿಳೆಯರು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣವನ್ನು ಲಪಟಾಯಿಸಿದ್ದಾರೆ.

ಕಳ್ಳಿಯರು ಸುಮಾರು 151 ಗ್ರಾಂ ಬಂಗಾರದ ಆಭರಣ ಹೊತ್ತೊಯ್ದಿದ್ದಾರೆ ಅಂತಾ ಪ್ರಿತೋಶ್ ದೂರು ನೀಡಿದ್ದಾನೆ. ಇಬ್ಬರು ಅಪರಿಚಿತ ಮಹಿಳೆಯರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಾವಳಿಯನ್ನು ಕೂಡ ಪೊಲೀಸರು ಪರಿಶೀಲಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...