alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದುನನ ಜೊತೆ ಮದುವೆ ಮಾಡಿಕೊಡಿ ಎಂದ್ಲು ಮಹಿಳೆ..ಯಾಕೆ ಗೊತ್ತಾ?

02rape01

ಮದುವೆಯಾಗುವುದಾಗಿ ನಂಬಿಸಿ ಶಾರೀರಿಕ ಸಂಬಂಧ ಬೆಳೆಸಿ ನಂತ್ರ ಮೋಸ ಮಾಡುವ ಪ್ರಕರಣ ಈಗ ಮಾಮೂಲಿಯಾಗಿಬಿಟ್ಟಿದೆ. ಪ್ರೀತಿ, ಸೆಕ್ಸ್ ಕೊನೆಯಲ್ಲಿ ದೋಖಾ. ಆದ್ರೆ ಉತ್ತರಾಖಂಡ್ ನಲ್ಲಿ ಸ್ವಲ್ಪ ಭಿನ್ನವಾಗಿರುವ ಘಟನೆ ನಡೆದಿದೆ. ಇಲ್ಲಿ ಮೋಸ ಮಾಡಿರುವುದು ಬೇರೆ ಯಾರೂ ಅಲ್ಲ, ಗಂಡನ ತಮ್ಮ.

ಘಟನೆ ನಡೆದಿರುವುದು ಉತ್ತರಾಖಂಡ್ ನ ಉಧಮ್ ಸಿಂಗ್ ನಗರದಲ್ಲಿ. ಅಲ್ಲಿ ಜನತಾ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಬಂದ ಮಹಿಳೆಯೊಬ್ಬಳು ಎಎಸ್ಪಿ ಬಳಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಆಕೆಗೆ 10 ವರ್ಷದ ಹಿಂದೆ ಮದುವೆಯಾಗಿತ್ತಂತೆ. ಮೂವರು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಪತಿ ಸಾವನ್ನಪ್ಪಿದ್ದಾನೆ.

ಮಕ್ಕಳಿಗೆ ಆಸರೆಯಾಗಲಿ ಎನ್ನುವ ಕಾರಣಕ್ಕೆ ಮೈದುನನ ಜೊತೆ ಮದುವೆ ಮಾಡುವ ನಿರ್ಧಾರಕ್ಕೆ ಗಂಡನ ಮನೆಯವರು ಬಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೈದುನ ಸತತ 2 ವರ್ಷಗಳಿಂದ ಅತ್ತಿಗೆ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಈಗ ಬೇರೆ ಹುಡುಗಿ ಸಿಕ್ಕ ಕಾರಣ ಈಕೆಯನ್ನು ನಿರಾಕರಿಸುತ್ತಿದ್ದಾನೆ. ಮದುವೆಯಾಗಲು ಒಪ್ಪುತ್ತಿಲ್ಲ.

ತನಗೆ ನ್ಯಾಯ ಕೊಡಿಸುವಂತೆ ಮಹಿಳೆ ಎಎಸ್ಪಿ ಬಳಿ ಕೇಳಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಎಎಸ್ಪಿ ಆದೇಶ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...