alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಓಡಿ ಹೋದ 4 ಮಕ್ಕಳ ತಾಯಿಗೆ ವಿಚಿತ್ರ ಶಿಕ್ಷೆ

ಮಧ್ಯಪ್ರದೇಶದ ಅನೇಕ ಕಡೆ ಇನ್ನೂ ಪಂಚಾಯತಿ ಪದ್ಧತಿ ರೂಢಿಯಲ್ಲಿದೆ. ಗ್ರಾಮಕ್ಕೆ ಪೊಲೀಸರನ್ನು ಬರಲು ಬಿಡದೆ ಪಂಚಾಯತಿ ಮುಖಂಡರೇ ತೀರ್ಪು ನೀಡುತ್ತಾರೆ. ಇತ್ತೀಚಿಗೆ ಬುಡಕಟ್ಟು ಪ್ರಾಬಲ್ಯವಿರುವ ಝಾಬುವಾ ಜಿಲ್ಲೆಯಲ್ಲಿ ಇಂಥ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬಳು ಪ್ರೇಮಿ ಜೊತೆ ಓಡಿ ಹೋಗಿದ್ದೇ ತಪ್ಪಾಗಿದೆ. ಪಂಚಾಯತಿ ಕರೆದ ಮುಖಂಡರು ಮಹಿಳೆಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಗಂಡನನ್ನು ಭುಜದ ಮೇಲೆ ಹೊತ್ತು ಮಹಿಳೆ ಗ್ರಾಮವನ್ನು ಸುತ್ತಿದ್ದಾಳೆ. ಆಕೆ ಭುಜದ ಮೇಲೆ ಗಂಡನನ್ನು ಹೊತ್ತು ಹೋಗುತ್ತಿದ್ದರೆ ಊರಿನ ಜನರೆಲ್ಲ ಆಕೆ ಮೇಲೆ ಚಪ್ಪಲಿ ಎಸೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ನಾಲ್ಕು ಮಕ್ಕಳ ಮಹಿಳೆ ಗಂಡ-ಮಕ್ಕಳನ್ನು ಬಿಟ್ಟು ಪ್ರೇಮಿ ಜೊತೆ ಓಡಿ ಹೋಗಿದ್ದಳಂತೆ. ಮರುದಿನ ಮತ್ತೆ ಗ್ರಾಮಕ್ಕೆ ಬಂದಿದ್ದಾಳೆ. ಪ್ರಕರಣ ಪಂಚಾಯತಿ ಮೆಟ್ಟಿಲೇರಿದೆ. ಪಂಚರು ಮಹಿಳೆಗೆ ಪತಿಯನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆ ನೀಡಿದ್ದಾರೆ. ಮಹಿಳೆ ಹಿಂದೆ ಬಂದ ಜನರು ಆಕೆಗೆ ಚಪ್ಪಲಿ ಎಸೆದಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...