alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತರಿಸಿದ ಮಗುವಿನ ತಲೆ ಹಿಡಿದು ರಸ್ತೆಗೆ ಬಂದ ಮಹಿಳೆ

moscow-severed-head_14567

ಸೋಮವಾರ ಮಹಿಳೆಯೊಬ್ಬಳು ಕತ್ತರಿಸಿದ್ದ ಮಗುವಿನ ತಲೆಯನ್ನು ಕೈನಲ್ಲಿ ಹಿಡಿದು ರಸ್ತೆಗೆ ಬಂದಿದ್ದಳು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಘಟನೆ ರಷ್ಯಾದ ವಾಯುವ್ಯ ಮಾಸ್ಕೋ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಅಲ್ಲಿ ಮಹಿಳೆಯೊಬ್ಬಳು ಮಗುವಿನ ಕತ್ತರಿಸಿದ ತಲೆಯನ್ನು ಕೈನಲ್ಲಿ ಹಿಡಿದುಕೊಂಡು, ನಾನು ಆತಂಕವಾದಿ ಎಂದು ಕೂಗಿ ಕೂಗಿ ಹೇಳ್ತಾ ಇದ್ದಳು.

ಘಟನೆ ನಡೆದ ತಕ್ಷಣ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಯ್ತು. ಮಹಿಳೆಯ ಹೆಸರನ್ನು ನಸ್ಯಾ ಎಂದು ಹೇಳಲಾಗಿದೆ. ಆಕೆಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಇದಕ್ಕಿಂತಲೂ ಮೊದಲು ಮಾಸ್ಕೋದ ಒಂದು ಕಟ್ಟಡಕ್ಕೆ ಬೆಂಕಿ ಬಿದ್ದಿತ್ತು. ಅಲ್ಲಿ ತಲೆ ಕತ್ತರಿಸಿದ ಮಗುವಿನ ದೇಹವೊಂದು ಪೊಲೀಸರಿಗೆ ಸಿಕ್ಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...