alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯತಮೆಯ ಇಬ್ಬರು ಗಂಡಂದಿರಿಗೆ ಕಾಟ ಕೊಟ್ಟ ಪ್ರೇಮಿ ಕೊನೆಗೆ ಕೈ ಕೊಟ್ಟ…!

ಜಾರ್ಖಂಡ್ ನಲ್ಲಿ ಪ್ರೇಮಿ ಕಾಟಕ್ಕೆ ಬೇಸತ್ತು ಇಬ್ಬರು ಪತಿಯಂದಿರಿಂದ ವಿಚ್ಛೇದನ ಪಡೆದ ಮಹಿಳೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ವಿಚ್ಛೇದನದ ನಂತ್ರ ಮದುವೆ ಆಸೆ ತೋರಿಸಿ ಮಹಿಳೆ ಜೊತೆ ಸಂಬಂಧ ಬೆಳೆಸಿದ ಪ್ರೇಮಿ ಈಗ ಬೇರೆ ಮದುವೆಯಾಗಲು ಹೊರಟಿದ್ದಾನೆ. ನ್ಯಾಯಕ್ಕಾಗಿ ಪೀಡಿತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.

2007ರಲ್ಲಿ ಪವನ್ ಎಂಬಾತನನ್ನು ಮಹಿಳೆ ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ. ಆದ್ರೆ 2008ರಲ್ಲಿ ಮಹಿಳೆಗೆ ಬೇರೆ ವ್ಯಕ್ತಿ ಜೊತೆ ಮದುವೆಯಾಗಿದೆ. ಮಗ ಕೂಡ ಜನಿಸಿದ್ದಾನೆ. ಆದ್ರೆ ಮಹಿಳೆ ಹಿಂದೆ ಬಿದ್ದ ಪವನ್ ಆಕೆ ಪತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದ್ರಿಂದ ಬೇಸತ್ತ ಮೊದಲ ಪತಿ ವಿಚ್ಛೇದನ ನೀಡಿದ್ದಾನೆ.

ನಂತ್ರ 2016ರಲ್ಲಿ ಮಹಿಳೆ ಮನೆಯವರ ಒತ್ತಾಯಕ್ಕೆ ಎರಡನೇ ಮದುವೆಯಾಗಿದ್ದಾಳೆ. ಎರಡನೇ ಪತಿಗೂ ಪವನ್ ತೊಂದರೆ ಮಾಡಿದ್ದಾನೆ. ಹಲ್ಲೆ ಕೂಡ ನಡೆಸಿದ್ದಾನೆ. ಹಾಗಾಗಿ 2ನೇ ಪತಿ ಕೂಡ ಮಹಿಳೆಗೆ ವಿಚ್ಛೇದನ ನೀಡಿದ್ದಾನೆ. ನಂತ್ರ ಮಹಿಳೆ ಮಗನ ಜೊತೆ ವಾಸವಾಗಿದ್ದಾಳೆ. ಮದುವೆ ಆಸೆ ತೋರಿಸಿ ಮಹಿಳೆ ಮನೆಗೆ ಬರ್ತಿದ್ದ ಪವನ್ ಆಕೆ ಜೊತೆ ಸಂಬಂಧ ಬೆಳೆಸಿದ್ದಾನೆ.

ಮಹಿಳೆ ಗರ್ಭಿಣಿ ಎಂಬ ವಿಷ್ಯ ಗೊತ್ತಾಗುತ್ತಿದ್ದಂತೆ ಗರ್ಭಪಾತಕ್ಕೆ ಒತ್ತಾಯ ಮಾಡಿದ್ದಾನೆ. ಜೊತೆಗೆ ಫೆಬ್ರವರಿ 12ರಂದು ಬೇರೆ ಮದುವೆಗೆ ಸಿದ್ಧನಾಗಿದ್ದಾನೆ. ಈ ಸಂಗತಿ ತಿಳಿದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ವಿಚಾರಣೆಗೆಂದು ಠಾಣೆಗೆ ಬಂದ ಪವನ್, ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಆಕೆ ಅನೇಕರ ಜೊತೆ ಸಂಬಂಧ ಬೆಳೆಸಿದ್ದು, ಜೈಲಿಗೆ ಹೋದ್ರೂ ಸರಿ ಆಕೆ ಮದುವೆಯಾಗಲ್ಲ ಎಂದಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...