alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಮಗಳನ್ನು ಅಪಹರಿಸಿ 8 ಮಕ್ಕಳನ್ನು ಕೈಗಿತ್ತ ಮಲತಂದೆ

ಆ ಹುಡುಗಿ ಕೇವಲ 11 ವರ್ಷದವಳಿದ್ಲು. ಆಗ್ಲೆ ಆಕೆಯನ್ನು ಮಲತಂದೆ ಅಪಹರಿಸಿದ್ದ. ಮಲತಂದೆ ತನ್ನ ಮಕ್ಕಳಿಗೆ ಜನ್ಮ ನೀಡುವಂತೆ ಮಗಳಿಗೆ ಒತ್ತಾಯಿಸಿದ್ದ. ಅಷ್ಟೆ ಅಲ್ಲ ತನ್ನ 8 ಮಕ್ಕಳಿಗೆ ಮಗಳೇ ಜನ್ಮ ನೀಡುವಂತೆ ಮಾಡಿದ್ದ. ಮಲತಂದೆ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಹುಡುಗಿ ಮೂರು ವರ್ಷದ ನಂತ್ರ ಸತ್ಯ ಹೇಳಿದ್ದಾಳೆ.

ಅಮೆರಿಕಾ ಟಿವಿ ಶೋ Dr. Oz Showನಲ್ಲಿ ಹುಡುಗಿ ಸಂದರ್ಶನ ಪ್ರಸಾರವಾಗ್ತಿದೆ. ಪೀಡಿತೆ ತಾಯಿಗೆ ನೋವು ನೀಡಲು 1997ರಲ್ಲಿ ತಂದೆ ಮಗಳನ್ನು ಅಪಹರಿಸಿದ್ದ. ಒಕ್ಲಹೋಮ್ ದಿಂದ ಮಗುವನ್ನು ಅಪಹರಿಸಿ ಮೆಕ್ಸಿಕೋದಲ್ಲಿಟ್ಟಿದ್ದ. ಮಲತಂದೆ ಮಗಳನ್ನು ಒತ್ತಾಯವಾಗಿ ಮದುವೆಯಾಗಿದ್ದಲ್ಲದೆ 8 ಮಕ್ಕಳ ತಾಯಿಯಾಗುವಂತೆ ಮಾಡ್ದ. ಮಕ್ಕಳನ್ನು ಹಾಗೂ ಪೀಡಿತೆಯನ್ನು ಟೆಂಟ್ ಹೌಸ್ ನಲ್ಲಿಟ್ಟಿದ್ದನಂತೆ.

2016ರಲ್ಲಿ ಪೀಡಿತೆ ಮಕ್ಕಳ ಜೊತೆ ಓಡಿ ಬಂದಿದ್ದಳು. ಅಪರಿಚಿತರ ಸಹಾಯ ಪಡೆದು ಅಮೆರಿಕ ರಾಯಬಾರಿ ಕಚೇರಿಗೆ ಬಂದವಳಿಗೆ ಸಹಾಯ ಸಿಕ್ಕಿತ್ತು. ಮಲತಂದೆ ಬಂಧನದಲ್ಲಿದ್ದು, ಇನ್ನೂ ಪ್ರಕರಣದ ತೀರ್ಪು ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...