alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ನಲ್ಲಿ ಮಾತನಾಡಲು ಕೊಡದ ಪತಿಗೆ ಬೆಂಕಿ ಹಚ್ಚಿದ್ಲು

ಪತಿ-ಪತ್ನಿ ಮೊಬೈಲ್ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಲರಾಂಪುರದಲ್ಲಿ ಪತ್ನಿ ಪತಿಯನ್ನು ಜೀವಂತ ಸುಟ್ಟ ಘಟನೆ ಬೆಳಕಿಗೆ ಬಂದಿದೆ.

35 ವರ್ಷದ ನನ್ಕೆ ಹಾಗೂ ಪತ್ನಿ ಪ್ರಿಯಾ ಮಧ್ಯೆ ಮೊಬೈಲ್ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಸದಾ ಮೊಬೈಲ್ ನಲ್ಲಿರುತ್ತಿದ್ದ ಪತ್ನಿ ಪ್ರಿಯಾ ಬಗ್ಗೆ ನನ್ಕೆ ಅಸಮಾಧಾನಗೊಂಡಿದ್ದ. ಫೋನ್ ಬಳಸದಂತೆ ಹೇಳಿದ್ದ. ಇದ್ರಿಂದ ಕೋಪಗೊಂಡ ಪ್ರಿಯಾ ಫೆಬ್ರವರಿ 7ರಂದು ನನ್ಕೆ ಮಲಗಿದ್ದ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.

ಕೂಗಾಟ ಕೇಳಿ ಮನೆಗೆ ಬಂದ ಅಕ್ಕಪಕ್ಕದವರು ನನ್ಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ನನ್ಕೆ ಸಾವನ್ನಪ್ಪಿದ್ದಾನೆ. ಪ್ರಿಯಾ ನಾಪತ್ತೆಯಾಗಿದ್ದಾಳೆ. ಘಟನೆ ನಡೆದು ಮೂರು ದಿನವಾದ್ರೂ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸದ ಪೊಲೀಸ್ ವಿರುದ್ಧ ಪೊಲೀಸ್ ಅಧೀಕ್ಷಕರು ತನಿಖೆಗೆ ಆದೇಶ ನೀಡಿದ್ದಾರೆ. ಪ್ರಿಯಾ ಹುಡುಕಾಟ ಮುಂದುವರೆದಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...