alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಯ ಹೃದಯ ಬಗೆದು ಹತ್ಯೆ ಮಾಡಿದ್ದಾಕೆಗೆ ಗಲ್ಲು

knife-killing-stabವಿವಾಹವಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ವಂಚಿಸಿದ ಪ್ರಿಯಕರನ ಹೃದಯ ಬಗೆದು ಭೀಕರವಾಗಿ ಹತ್ಯೆ ಮಾಡಿದ್ದ ಯುವತಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಬಾಂಗ್ಲಾದೇಶದ ಢಾಕಾದಲ್ಲಿ 2014 ರ ಮಾರ್ಚ್ ನಲ್ಲಿ ಈ ಭೀಕರ ಹತ್ಯೆ ನಡೆದಿದ್ದು, ಕೆಳ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಈಗ ಹೈಕೋರ್ಟ್ ಸಹ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ಫಾತೀಮಾ ಅಖ್ತರ್ ಸೋನಾಲಿ ಎಂಬ 21 ವರ್ಷದ ಯುವತಿ, 28 ವರ್ಷದ ಎಮದಾಲ್ ಹಕ್ ಶಿಪಾನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆಕೆಯನ್ನು ದೈಹಿಕವಾಗಿ ಬಳಸಿಕೊಂಡ ಆತ ಈ ಕಾಮಕೇಳಿಯನ್ನು ರೆಕಾರ್ಡ್ ಮಾಡಿಕೊಂಡು ತನ್ನ ಲ್ಯಾಪ್ ಟಾಪ್ ನಲ್ಲಿರಿಸಿಕೊಂಡಿದ್ದ. ಬಳಿಕ ಬೇರೊಬ್ಬ ಯುವತಿ ಜೊತೆ ಶಿಪಾನ್ ಚಕ್ಕಂದವಾಡುತ್ತಿದ್ದು, ಇದರಿಂದ ಆಕ್ರೋಶಗೊಂಡ ಫಾತೀಮಾ, ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಆತ ಪ್ರಜ್ಞಾಶೂನ್ಯನಾದಾಗ ಹೃದಯವನ್ನೇ ಬಗೆದು ಹಾಕಿದ್ದಳು. ವಿಚಾರಣೆ ವೇಳೆ, ಆತನ ಹೃದಯ ಎಷ್ಟು ದೊಡ್ಡದಿರಬಹುದೆಂಬುದನ್ನು ತಿಳಿಯಲು ಹಾಗೆ ಮಾಡಿದ್ದಾಗಿ ಹೇಳಿದ್ದಳು. ಇದೀಗ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಈಕೆಗೆ ಶಿಕ್ಷೆ ಜಾರಿಯಾದರೆ ಬಾಂಗ್ಲಾದೇಶದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳೆ ಎನಿಸಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...