alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಮಹಿಳೆಯಿಂದ ಬ್ಲಾಕ್ ಮೇಲ್

video

ಇದೊಂದು ಸಿನಿಮಾ ಸ್ಟೈಲಿನ ಬ್ಲಾಕ್ ಮೇಲ್. ಲಖ್ನೋದಲ್ಲಿ ಎಂಜಿನಿಯರ್ ಒಬ್ಬನ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ಹಾಕೋದಾಗಿ ಬೆದರಿಸಿದ ಮಹಿಳೆ 20 ಲಕ್ಷ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾಳೆ.

ಈ ಜಾಲದ ರೂವಾರಿ ಬಹ್ರೈಚ್ ನ ಫರ್ಕಾನ್ ಎಂಬಾತನನ್ನು ಬಂಧಿಸಿರೋ ಪೊಲೀಸರು ಉಳಿದವರಿಗಾಗಿ ಶೋಧ ನಡೆಸಿದ್ದಾರೆ. ಹಸನ್ ಗಂಜ್ ನ ಮೋತಿ ಸಿಂಗ್ ಎಂಬಾತ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾನೆ. ಆತ ಶಾಲೆಯೊಂದನ್ನು ನಡೆಸ್ತಾ ಇದ್ದ. ಆ ಶಾಲೆಯಲ್ಲಿ ಕೆಲಸ ಕೊಡುವಂತೆ ಕೇಳಿಕೊಂಡು ನವೆಂಬರ್ ನಲ್ಲಿ ಮಹಿಳೆಯೊಬ್ಳು ಬಂದಿದ್ಲು. ಉದ್ಯೋಗಕ್ಕೆ ಬೇಕಾದ ಅರ್ಹತೆ ಆಕೆಗೆ ಇಲ್ಲದೇ ಇರೋದ್ರಿಂದ ಕೆಲಸ ಕೊಡಲು ಸಾಧ್ಯವಿಲ್ಲ ಅಂತಾ ಮೋತಿ ಸಿಂಗ್ ಹೇಳಿದ್ದ.

ತಾನು ತುಂಬಾ ಬಡವಳು ಅಂತಾ ಆಕೆ ಕಣ್ಣೀರಿಟ್ಟಿದ್ಲು, ಕರುಣೆಯಿಂದ ಆತ 400 ರೂಪಾಯಿ ಕೊಟ್ಟಿದ್ದ. ಡಿಸೆಂಬರ್ 20ರಂದು ಶಾಲೆಯ ಬಳಿ ಸಿಕ್ಕ ಆ ಮಹಿಳೆ ಬೈಕ್ ನಲ್ಲಿ ಲಿಫ್ಟ್ ಕೊಡುವಂತೆ ಸಿಂಗ್ ಬಳಿ ಕೇಳಿದ್ದಾಳೆ. ಆಕೆ ಸಿಂಗ್ ನನ್ನು ಊರ ಹೊರಗಿನ ಜಾಗವೊಂದಕ್ಕೆ ಕರೆದೊಯ್ದಿದ್ದಳು, ಅಲ್ಲಿ ಇಬ್ಬರು ಯುವಕರಿದ್ರು. ಸಿಂಗ್ ಗೆ ಗನ್ ತೋರಿಸಿ ಬೆದರಿಸಿ ಅವನನ್ನ ಕಿಡ್ನಾಪ್ ಮಾಡಿದ್ರು, ಕೋಣೆಯೊಂದರಲ್ಲಿ ಮಹಿಳೆ ಜೊತೆಗೆ ಅಶ್ಲೀಲ ಭಂಗಿಯಲ್ಲಿ ಸಿಂಗ್ ನನ್ನು ನಿಲ್ಲಿಸಿ ವಿಡಿಯೋ ಮಾಡಿದ್ದಾರೆ.

20 ಲಕ್ಷ ರೂಪಾಯಿ ಕೊಡದೇ ಇದ್ರೆ ವಿಡಿಯೋ ಬಹಿರಂಗ ಮಾಡೋದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಅವರು ಪದೇ ಪದೇ ಫೋನ್ ಮಾಡಿ ಬೆದರಿಸುತ್ತಲೇ ಇದ್ರು, ಅಷ್ಟೊಂದು ಹಣವಿಲ್ಲ ಅಂತಾ ಸಿಂಗ್ ಹೇಳಿದಾಗ 2 ಲಕ್ಷ ಕೊಡು ಅಂತಾನೂ ಹೇಳಿದ್ರು. ಕೊನೆಗೆ ಸಿಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ, ಈಗಾಗ್ಲೇ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...