alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗನನ್ನೇ ಹತ್ಯೆ ಮಾಡಿದ ಮಹಾತಾಯಿ

ಪಟಿಯಾಲ: ತಾಯಿಯೊಬ್ಬಳು ಪ್ರಿಯಕರನ ಜತೆ ಸೇರಿ ತನ್ನ 17 ವರ್ಷದ ಮಗನನ್ನೇ ಹತ್ಯೆ ಮಾಡಿದ ಪ್ರಕರಣ ಪಟಿಯಾಲ ಸಮೀಪದ ನಭಾ ವಿಭಾಗದ ಚಿಂತಾವಾಲ ಗ್ರಾಮದಲ್ಲಿ ನಡೆದಿದೆ. ಕೊಲೆ ದಿನ ಬೆಳಗಿನ ಜಾವ 2.20ಕ್ಕೆ ಆರೋಪಿತ ತಾಯಿ ಮಾಡಿದ್ದ ದೂರವಾಣಿ ಕರೆಯ ಜಾಡು ಹಿಡಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಸುಖಬೀರ್ ಸಿಂಗ್ ಮೃತ ಬಾಲಕ. ಈ ಘಟನೆ ಸಂಬಂಧ 38 ವರ್ಷದ ಮಹಿಳೆ ಹಾಗೂ ಆಕೆಯ 32 ವರ್ಷದ ಪ್ರಿಯತಮನನ್ನು ಪೊಲೀಸರು ಬಂಧಿಸಿದ್ದಾರೆ. ಸುಖಬೀರ್ ನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಆರೋಪಿಗಳಿಬ್ಬರು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಖಬೀರ್ ಮೃತ ದೇಹ ಅವರ ಮನೆ ಮುಂದೆ ಪತ್ತೆಯಾದಾಗ, ಆತ ಒಬ್ಬ ಮಾದಕ ವ್ಯಸನಿ ಎಂದು ಆತನ ತಾಯಿಯೇ ಬಿಂಬಿಸಿದ್ದಳು. ಹಾಗೆಯೇ ಸುಖಬೀರ್ ಇತ್ತೀಚಿನ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದ ಎಂದೂ ಸಹ ಹೇಳಿಕೆ ನೀಡಿದ್ದಳು. ಆದರೆ, ಗ್ರಾಮದ ಕೆಲವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಿದ್ದರು.

ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರಿಬ್ಬರೂ ಹತ್ಯೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಪ್ರಕರಣ ದಾಖಲಾಗಿದೆ. ಆತನ ಮೃತ ದೇಹದ ಪಂಚನಾಮೆ ಮಾಡದಂತೆ ಪೊಲೀಸರ ಮೇಲೆ ಆರೋಪಿಗಳು ಒತ್ತಡ ಹೇರಿದ್ದರು.

ಆಕೆಯು ಸುಖಬೀರ್ ಕೈಕಾಲು ಕಟ್ಟಿ ಕೀಟನಾಶಕ ಸೇವಿಸುವಂತೆ ಬಲವಂತ ಮಾಡಿದ್ದಳು. ಬಳಿಕ ಮೃತ ದೇಹವನ್ನು ಮನೆಯ ಹೊರಗೆ ಇರಿಸಿದ್ದರು. ನಂತರ ಪ್ರಿಯಕರನಿಗೆ ಕರೆ ಮಾಡಿ ನಾನು ಸೇಫ್ ಆಗಿದ್ದೇನೆಂದು ಬೆಳಗಿನ ಜಾವ 2.20ಕ್ಕೆ ಮೊಬೈಲ್ ಕರೆ ಮಾಡಿದ್ದಳು. ಈ ಕರೆಯ ಬೆನ್ನು ಹತ್ತಿದ ಪೊಲೀಸರಿಗೆ ಘಟನೆಯ ಪೂರ್ವಾಪರ ಪತ್ತೆಯಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...