alex Certify
ಕನ್ನಡ ದುನಿಯಾ       Mobile App
       

Kannada Duniya

ನಾದಿನಿಗೆ ಇಂಥ ಮೆಸ್ಸೇಜ್ ಕಳಸ್ತಿದ್ದ ಅಕ್ಕನ ಗಂಡ

ಛತ್ತೀಸ್ಗಢದ ರಾಜಧಾನಿ ರಾಯ್ಪುರ್ ನಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಮಹಿಳೆ ದೂರಿನ ಮೇಲೆ ಮಹಿಳೆ ಭಾವನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರೋಪಿ ಜಾರ್ಖಂಡ್ ನ ಧನ್ಬಾದ್ ನಲ್ಲಿ ನೆಲೆಸಿದ್ದಾನೆ.

ಆರೋಪಿ ಸುರೇಂದ್ರ ಸಿಂಗ್ ವಿರುದ್ಧ ಕಿರುಕುಳ ದೂರು ದಾಖಲಾಗಿದೆ. ಭಾವ ತನ್ನ ಮದುವೆಗೆ ಅನೇಕ ಬಾರಿ ಅಡ್ಡಿಯುಂಟು ಮಾಡಿದ್ದಾನೆಂದು ದೂರಿದ್ದಾಳೆ. ಭಾವ ಎದುರಿಗೆ ಸಿಕ್ಕಾಗೊಂದೇ ಅಲ್ಲ ವಾಟ್ಸ್ ಅಪ್ ಹಾಗೂ ಫೇಸ್ಬುಕ್ ನಲ್ಲಿಯೂ ತೊಂದರೆ ಕೊಡ್ತಿದ್ದ. ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ.

ಈ ಬಗ್ಗೆ ಮಹಿಳೆ ಅಕ್ಕನಿಗೆ ದೂರಿದ್ದಳು. ಅಕ್ಕ ಬುದ್ದಿ ಹೇಳಿದ ಸ್ವಲ್ಪ ದಿನ ಭಾವ ಸುಮ್ಮನಿದ್ದ. ಮತ್ತೆ ತನ್ನ ಕೆಲಸ ಶುರುಮಾಡಿದ್ದಾನೆ. ನಂಬರ್ ಹಾಗೂ ಫೇಸ್ಬುಕ್ ಅಕೌಂಟ್ ಬ್ಲಾಕ್ ಮಾಡಿದ್ರೂ ಆತ ತನ್ನ ಕೆಲಸ ಬಿಡಲಿಲ್ಲ. ಮನೆಯವರಿಗೂ ವಿಷಯ ತಿಳಿಸಿದ್ದಾಳೆ ಮಹಿಳೆ. ಅವರೂ ಬುದ್ಧಿವಾದ ಹೇಳಿದ್ದಾರೆ. ಆದ್ರೆ ಭಾವ ಸುರೇಂದ್ರ ಸುಧಾರಿಸಲಿಲ್ಲ. ಭಾವನ ಕಾಟಕ್ಕೆ ಬೇಸತ್ತ ಮಹಿಳೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...