alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತ್ ರೂಂನಲ್ಲಿ ಮಹಿಳೆ ವಿಡಿಯೋ ಮಾಡ್ತಿದ್ದ ಆರೋಪಿಗೆ ಬಿತ್ತು ಒದೆ

ಬಿಹಾರ ಬೇತಿಯಾದಲ್ಲಿ ಮಹಿಳೆ ಸ್ನಾನದ ವಿಡಿಯೋ ಮಾಡ್ತಿದ್ದ ಕಾಮುಕನಿಗೆ ಭರ್ಜರಿ ಗೂಸಾ ನೀಡಿದ ಘಟನೆ ನಡೆದಿದೆ. ಒದೆ ತಿಂದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಳು ಎನ್ನಲಾಗಿದೆ. ಬಾತ್ ರೂಮನಲ್ಲಿ ವಿಡಿಯೋ ಮಾಡುತ್ತಿರುವುದು ಕಾಣಿಸಿದೆ. ಮಹಿಳೆ ಕಿರುಚಿಕೊಂಡಿದ್ದಾಳೆ. ಸಂಬಂಧಿಕರು ಯುವಕನನ್ನು ಹಿಡಿದು ಹೊಡೆತ ನೀಡಿದ್ದಲ್ಲದೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಗ್ಯ ಕೇಂದ್ರದಲ್ಲಿ ನಾನು ಕೆಲಸ ಮಾಡ್ತೇನೆ. ಪಕ್ಕದ ಬಾತ್ ರೂಂನಲ್ಲಿ ಮೊಬೈಲ್ ನಲ್ಲಿ ಮಾತನಾಡ್ತಿದ್ದ. ಮಾತು ಮುಗಿದ ನಂತ್ರ ಮೊಬೈಲ್ ಅಲ್ಲೇ ಇಟ್ಟಿದ್ದೆ. ಅದನ್ನೇ ಮಹಿಳೆ ತಪ್ಪು ತಿಳಿದಿದ್ದಾಳೆಂದು ಆರೋಪಿ ಹೇಳಿದ್ದಾನೆ. ಇತ್ತ ಆರೋಗ್ಯ ಕೇಂದ್ರದ ಮಾಲೀಕ ಆರೋಪಿ ತನ್ನ ಸಿಬ್ಬಂದಿಯಲ್ಲ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...