alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ಪತಿಯ ಶವವನ್ನು ಮನೆಯಲ್ಲಿಟ್ಟು ಪತ್ನಿ ಮಾಡಿದ್ಲು…!

dead_body_1499323607_618x347

ಕೇರಳದಲ್ಲಿ ಅಂಧವಿಶ್ವಾಸಿ ಮಹಿಳೆಯೊಬ್ಬಳು ಮೃತ ಪತಿಯ ದೇಹವನ್ನು ಎರಡು ತಿಂಗಳು ಮನೆಯಲ್ಲಿಟ್ಟುಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾರ್ಥನೆ ಮಾಡಿದ್ರೆ ಸತ್ತ ಪತಿ ಮತ್ತೆ ಎದ್ದು ಬರ್ತಾನೆಂದು ಮಹಿಳೆ ನಂಬಿದ್ದಳು. ಮಹಿಳೆಯ ಅಂಧವಿಶ್ವಾಸಕ್ಕೆ ಮೂವರು ಮಕ್ಕಳು ಬೆಂಬಲ ನೀಡಿದ್ದಾರೆ. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಮನೆಗೆ ಬಂದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದು, ತನಿಖೆ ಶುರುಮಾಡಿದ್ದಾರೆ.

ಮಾಹಿತಿ ಪ್ರಕಾರ ಕೇರಳದ ಮಲ್ಲಾಪುರಂನಲ್ಲಿ ಮೃತ ಸಯೀದ್ (55) ತನ್ನ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗನ ಜೊತೆ ವಾಸವಾಗಿದ್ದ. ಸುಮಾರು 2 ತಿಂಗಳ ಹಿಂದೆ ಸಯೀದ್ ಸಾವನ್ನಪ್ಪಿದ್ದಾನೆ. ಆದ್ರೆ ಈ ವಿಷಯವನ್ನು ಮಹಿಳೆ ಯಾರಿಗೂ ಹೇಳಿಲ್ಲ. ಪ್ರಾರ್ಥನೆ ಮಾಡಿದ್ರೆ ಪತಿ ವಾಪಸ್ ಬರ್ತಾನೆಂದು ನಂಬಿದ ಮಹಿಳೆ ಮನೆಯಲ್ಲಿಯೇ ಹೆಣವನ್ನು ಬಚ್ಚಿಟ್ಟು ಅದ್ರ ಮುಂದೆ ಪ್ರತಿದಿನ ಪ್ರಾರ್ಥನೆ ಮಾಡಿದ್ದಾಳೆ.

ಸಯೀದ್ ಸಹೋದರ ಒಂದು ದಿನ ಸಯೀದ್ ಮನೆಗೆ ಬಂದಿದ್ದಾನೆ. ಆದ್ರೆ ಮನೆ ಬಾಗಿಲು ಮುಚ್ಚಿದ್ದರಿಂದ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಅಕ್ಕ-ಪಕ್ಕದವರನ್ನು ಕೇಳಿದಾಗ ಸಯೀದ್ ಅನೇಕ ದಿನಗಳಿಂದ ಕಾಣಿಸ್ತಿಲ್ಲ ಎಂಬ ವಿಷಯ ಗೊತ್ತಾಗಿದೆ. ತಕ್ಷಣ ಆತನ ಸಹೋದರ ಪೊಲೀಸರಿಗೆ ದೂರು ನೀಡಿದ್ದಾನೆ. ಮನೆಗೆ ಬಂದು ಬಾಗಿಲು ಒಡೆದ ಪೊಲೀಸರು ಒಳಗಿನ ದೃಶ್ಯ ನೋಡಿ ಕಂಗಾಲಾಗಿದ್ದಾರೆ.

ಹೆಣದ ಮುಂದೆ ತಾಯಿ ಹಾಗೂ ಮೂವರು ಮಕ್ಕಳು ಕುಳಿತು ಪ್ರಾರ್ಥನೆ ಮಾಡ್ತಿದ್ದಾರೆ. ವಾಸನೆ ಬರದಿರಲೆಂದು ಅಗರಬತ್ತಿ ಹಚ್ಚಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತಾಯಿ ಹಾಗೂ ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...