alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ತಾಯಿ-ಮಗಳಿಂದ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ

ಹಿಮಾಚಲ ಪ್ರದೇಶದ ಸೊಲಾನ್ ಜಿಲ್ಲೆಯಲ್ಲಿ 17ವರ್ಷದ ಅಪ್ರಾಪ್ತನ ಮೇಲೆ ಮೂರು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನೇಪಾಳ ಮೂಲದ 45 ವರ್ಷದ ಮಹಿಳೆ ಮತ್ತು 22 ವರ್ಷದ ಆಕೆಯ ಮಗಳ ಮೇಲೆ ಅಪ್ರಾಪ್ತನ ತಂದೆ ಕೇಸು ದಾಖಲಿಸಿದ್ದಾರೆ.

ಇಬ್ಬರು ಮಹಿಳೆಯರು ಮೂರು ತಿಂಗಳ ಕಾಲ 17 ವರ್ಷ ಆರು ತಿಂಗಳ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಅಂತ ದೂರು ನೀಡಿದ್ದಾರೆ. ಈ ಸಂಬಂಧ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ನಡೆಸ್ತಿದ್ದಾರೆ. ಆದ್ರೆ ಇನ್ನೂ ಆ ಇಬ್ಬರು ಮಹಿಳೆಯರನ್ನ ಪೊಲೀಸರು ಬಂಧಿಸಿಲ್ಲ.

ಯುವಕನ ತಂದೆಯ ಪ್ರಕಾರ ಮಹಿಳೆಯರು ಆತನ ಮಗನನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರಂತೆ. ಈ ಬಗ್ಗೆ ಪ್ರಕರಣದ ಆರೋಪಿತೆಯ ಪತಿಯನ್ನ ವಿಚಾರಣೆಗೆ ಒಳಪಡಿಸಿದ್ರೆ ಆತ ತನ್ನ ಹೆಂಡತಿಯನ್ನ ತೊರೆದಿರೋದಾಗಿ ಹೇಳ್ತಿದ್ದಾನೆ. ಅದ್ರೆ ಅಕೆ ವಿಧವೆ ಅಂತ ಕೆಲವರು ಹೇಳ್ತಿದ್ದಾರೆ. ಪೊಲಿಸರು ಪ್ರಕರಣದ ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...