alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆಯರ ಜೊತೆಗೆ ಬಂದ ಯುವತಿಗೆ ಡಿಸ್ಕೋಥೆಕ್ ನಲ್ಲಿ ಏನು ಮಾಡಿದ್ರು ಗೊತ್ತಾ?

ಮಹಾರಾಷ್ಟ್ರದ ಡಿಸ್ಕೋಥೆಕ್ ಗಳು ಹೆಣ್ಣು ಮಕ್ಕಳಿಗೆ ಸೇಫ್ ಅಲ್ಲ ಅನ್ನುವುದು ಮತ್ತೆ ಸಾಬೀತಾಗಿದೆ. ಇಲ್ಲಿನ ಸಾಕಿನಾಕಾದ ಹೆಸರಾಂತ ಡಿಸ್ಕೋಥೆಕ್ ವೊಂದರಲ್ಲಿ ಅಪರಿಚಿತ ಯುವಕರ ಗುಂಪೊಂದು 26 ವರ್ಷದ ಯುವತಿಯ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಕೆಯ ಗೆಳೆಯನ ಮೇಲೆ ಹಲ್ಲೆಯನ್ನೂ ನಡೆಸಿದೆ.

ಈ ಘಟನೆ ನಡೆದದ್ದು ಸಾಕಿನಾಕದ ದಿ ಕಲ್ಟ್ ಅನ್ನೋ ಡಿಸ್ಕೋಥೆಕ್ ನಲ್ಲಿ. ಸಂತ್ರಸ್ತ ಯುವತಿ ತನ್ನ ನಾಲ್ವರು ಗೆಳೆಯರೊಂದಿಗೆ ರಾತ್ರಿ ವೇಳೆ ಡಿಸ್ಕೋಥೆಕ್ ಗೆ ಬಂದಿದ್ದಾಳೆ. ಈ ವೇಳೆ ಕೂತಿದ್ದಾಗ ಯುವಕರ ಗುಂಪೊಂದು ಯುವತಿ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದೆ. ಜನಜಂಗುಳಿ ಇದ್ದದ್ದರಿಂದ ಎಲ್ಲೋ ತಪ್ಪಿ ಮೈ ಮುಟ್ಟಿರಬಹುದು ಎಂದು ಯುವತಿ ಅದನ್ನು ನಿರ್ಲಕ್ಷಿಸಿದ್ದಾಳೆ.

ಸ್ವಲ್ಪ ಹೊತ್ತಿನ ಬಳಿಕ ಆಕೆ ಸೋಫಾದ ಮೇಲೆ ಬಂದು ಕೂತಾಗ ಆ ಯುವಕರ ಗುಂಪಿನಲ್ಲಿದ್ದ ಯುವಕನೊಬ್ಬ ಬಳಿ ಬಂದು ಅಲ್ಲೂ ಆಕೆಯ ಮೈ ಮುಟ್ಟಿದ್ದಾನೆ. ಇದನ್ನು ಕಂಡ ಆಕೆಯ ಗೆಳೆಯನೊಬ್ಬ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಆಗ ರೊಚ್ಚಿಗೆದ್ದ ಆ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ, ಜತೆಗೆ ಆತನ ಮೇಲೆ ಬಿಯರ್ ಬಾಟ್ಲಿ ಎಸೆದಿದೆ. ತಕ್ಷಣ ಹೋಟೆಲ್ ಸಿಬ್ಬಂದಿ ಸಂತ್ರಸ್ತರ ನೆರವಿಗೆ ಬಂದರಾದರರೂ ಅಷ್ಟೊತ್ತಿಗೆ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಬಿಯರ್ ಬಾಟಲಿ ತಗುಲಿ ಇಬ್ಬರಿಗೆ ಗಾಯಗಳಾಗಿವೆ. ಪೊಲೀಸರು ಸಿಸಿ ಟಿವಿ ದಾಖಲೆಗಳನ್ನು ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...