alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಬಲತ್ಕಾರದ ಬಳಿಕ ರಾಕ್ಷಸೀಯ ಕೃತ್ಯ

ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಘೋರ ಕೃತ್ಯವೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು, ಖಾಸಗಿ ಅಂಗಕ್ಕೆ ಲೋಹದ ವಸ್ತು ಹಾಕಿದ್ದಾರೆ.

ಪಶ್ವಿಮ ಬಂಗಾಳದ ಕುಶ್ಮಾಂಡಿ ಬಳಿ ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ದುರುಳರು ಇಂತಹ ಘೋರ ಕೃತ್ಯವೆಸಗಿದ್ದಾರೆ. ವಿಕಲಚೇತನಳಾಗಿರುವ ಮಹಿಳೆಯನ್ನು ಸೇತುವೆ ಕೆಳಗೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅಪರಿಚಿತರು ಬಲತ್ಕಾರ ಮಾಡಿದ್ದಾರೆ. ಬಳಿಕ ಕಬ್ಬಿಣದ ವಸ್ತುವನ್ನು ಖಾಸಗಿ ಅಂಗದೊಳಗೆ ಹಾಕಿ ಪರಾರಿಯಾಗಿದ್ದಾರೆ.

ಆಕೆಯನ್ನು ರಕ್ಷಿಸಿದ ಸ್ಥಳೀಯರು ಮಾಲ್ಡಾ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಅತ್ಯಾಚಾರ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಸಂಘಟನೆಯ ಕಾರ್ಯಕರ್ತೆ ಚಿರಾಶ್ರೀ ದಾಸ್ ಗುಪ್ತ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...