alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಗೆ ಮದ್ಯ ಕುಡಿಸಿ ಮಾನಗೇಡಿ ಕೃತ್ಯವೆಸಗಿದ ಮಹಿಳೆ

ನವದೆಹಲಿ: ಸೋದರನ ಪುತ್ರಿಗೆ ಬಲವಂತವಾಗಿ ಮದ್ಯ ಕುಡಿಸಿದ ಮಹಿಳೆ, ತನ್ನ ಪ್ರಿಯಕರನಿಗೇ ಅತ್ಯಾಚಾರವೆಸಗಲು ಕುಮ್ಮಕ್ಕು ನೀಡಿದ್ದಾಳೆ.

ದೆಹಲಿ ಹೊರವಲಯದ ಶಹಾಬಾದ್ ಡೈರಿಯ ಅರಣ್ಯದಲ್ಲಿ 13 ವರ್ಷದ ಬಾಲಕಿಗೆ ಮದ್ಯ ಕುಡಿಸಿದ 30 ವರ್ಷದ ಮಹಿಳೆ, ತನ್ನ ಪ್ರಿಯಕರನಿಗೆ ಅತ್ಯಾಚಾರ ಎಸಗುವಂತೆ ತಿಳಿಸಿದ್ದಾಳೆ. ಆಕೆಯ ಪ್ರಿಯಕರ ಮುಖೇಶ್ ಕುಮಾರ್ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಬಾಲಕಿಯ ತಂದೆಗೆ ವಿಷಯ ಗೊತ್ತಾಗಿದ್ದು, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಬಾಲಕಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಬಾಲಕಿ ಮನೆಗೆ ತೆರಳಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಪರಾರಿಯಾಗಿರುವ ಆರೋಪಿ ಮುಖೇಶ್ ಕುಮಾರ್ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.

ಬಾಲಕಿಯ ತಾಯಿ ಕುಟುಂಬವನ್ನು ತೊರೆದಿದ್ದು, ಬಾಲಕಿ ಮಹಿಳೆಯ ಮನೆಗೆ ಹೋಗುತ್ತಿದ್ದಳು. ಮಹಿಳೆ ಹಾಗೂ ಆಕೆಯ ಪ್ರಿಯಕರ ಮದ್ಯಪಾನ ಮಾಡುತ್ತಿದ್ದರು. ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿದ್ದ ಮಹಿಳೆ, ಅತ್ಯಾಚಾರವೆಸಗಲು ಪ್ರಿಯಕರನಿಗೆ ಕುಮ್ಮಕ್ಕು ನೀಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...