alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಮಹಿಳೆ ಖಾಸಗಿ ಅಂಗದಲ್ಲಿ ಸಿಕ್ತು ಎರಡು ಬಾಟಲ್

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದ ಮಹಿಳಾ ಹತ್ಯೆಯೊಂದು ಚರ್ಚೆಗೆ ಕಾರಣವಾಗಿದೆ. ಆಕೆ ಪತಿಯೇ ಹತ್ಯೆಗೈದಿದ್ದಾನೆಂಬ ಪೊಲೀಸರ ಶಂಕೆ ನಿಜವಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಮಹಿಳೆ ಖಾಸಗಿ ಅಂಗದಲ್ಲಿ ಬಿಯರ್ ಹಾಗೂ ತಂಪು ಪಾನೀಯದ ಎರಡು ಬಾಟಲಿ ಸಿಕ್ಕಿದೆ ಎನ್ನಲಾಗಿದೆ.

ಅಶೋಕ್ ಗಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯಿಂದ ಕೆಟ್ಟ ವಾಸನೆ ಬರ್ತಿದ್ದ ಕಾರಣ ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದ್ದಾರೆ. ಮನೆ ಬಾಗಿಲು ಒಡೆದು ನೋಡಿದಾಗ ಬೆಡ್ ರೂಂನಲ್ಲಿ ಮಹಿಳೆ ಶವ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ವೇಳೆ ಎರಡು ಬಾಟಲಿ ಮಹಿಳೆ ಖಾಸಗಿ ಅಂಗದಲ್ಲಿ ಸಿಕ್ಕಿದೆ.

ವಿಚಾರಣೆ ಶುರು ಮಾಡಿದ ಪೊಲೀಸರು ಮಹಿಳೆ ಪತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆಂದು ಪತಿ ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...